ಮೈಸೂರು,ಏ.27: ಮೈಸೂರಿನ ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ ಬಿಸಿಲಿನ ತಾಪದಿಂದ ಬಸವಳಿದ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ.
ನಗರದ ಲಕ್ಷ್ಮಿಪುರಂನಲ್ಲಿರುವ ಮರಗಳಿಗೆ ಕೆ ಎಂ ಪಿ ಕೆ ಟ್ರಸ್ಟ್ ಹಾಗೂ ಅರಿವು ಸಂಸ್ಥೆ ವತಿಯಿಂದ 30ರಿಂದ 40ಕ್ಕೂ ಹೆಚ್ಚು ಕಡೆಗಳಲ್ಲಿ ಪಕ್ಷಿಗಳ ನೀರಿನ ಸಂಗ್ರಹ ಹಾಗೂ ನೀರಿನ ಅರವಟ್ಟಿಗೆ ಅಳವಡಿಸಲಾಯಿತು.
ಈ ವೇಳೆ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ನಿರಂತರವಾಗಿ ಎರಡು ತಿಂಗಳಿಂದ ನಗರದ ಹಕವೆಡೆ ನೀರಿನ ಬೌಲನ್ನು ಇಟ್ಟಿದ್ದೇವೆ ಎಂದು ಹೇಳಿದರು.
ಮನುಷ್ಯನಿಗೆ ಹೇಗೆ ದಿನನಿತ್ಯದ ಬದುಕಿನಲ್ಲಿ ಆಹಾರ, ನೀರು, ಗಾಳಿ ಬೇಕೊ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಕೂಡ ಬೇಕು, ಇಂತಹ ಬಿರು ಬಿಸಿಲಿನಲ್ಲಿ ಮನುಷ್ಯರೇ ಜೀವನ ಮಾಡುವುದು ಕಷ್ಟ ಇಂತಹ ಸಂದರ್ಭದಲ್ಲಿ ಪಕ್ಷಿಗಳು ಹೇಗೆ ಬದುಕಬೇಕು ಹಾಗಾಗಿ ಪಕ್ಷಿಗಳು ನೀರು ಕುಡಿಯಲು ಪ್ಲಾಸ್ಟಿಕ್ ಬೌಲ್ ಗಳಲ್ಲಿ ನೀರು ಹಾಕಿ ಗಿಡ ಮರಗಳಿಗೆ ಅಲ್ಲಲ್ಲಿ ಹಗ್ಗದಿಂದ ನೇತು ಹಾಕಿದ್ದೇವೆ ಎಂದು ತಿಳಿಸಿದರು.
ಬೌಲ್ ಗಳನ್ನು ನೋಡಿದ ಪಕ್ಷಿಗಳು ಆದರ ಮೇಲೆ ಕುಳಿತು ನೀರನ್ನು ಕುಡಿದು ದಾಹವನ್ನು ತೀರಿಸಿಕೊಳ್ಳುಲು ಸಹಾಯವಾಗುತ್ತದೆ ಎಂದು ಹೇಳಿದರು.
ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಗಿರೀಶ್ ರಾಮ್ ಮೂರ್ತಿ, ಎಸ್ ಎನ್ ರಾಜೇಶ್, ಶ್ರೀಕಾಂತ್ ಕಶ್ಯಪ್, ಬೈರತಿ ಲಿಂಗರಾಜು, ಚಕ್ರಪಾಣಿ, ಮಹೇಶ್ ಕುಮಾರ್, ಭಂಡಾರಿ, ದಯಾನಂದ್ ಮತ್ತಿತರರು ಹಾಜರಿದ್ದರು.