Fri. Mar 6th, 2026

ನಾಳಿನ ಡಿನ್ನರ್ ಮೀಟಿಂಗ್ ನಂತರದ ಸಂದೇಶವನ್ನು ನಿರೀಕ್ಷಿಸುತ್ತಿದ್ದೇವೆ: ಸತೀಶ್ ಜಾರಕಿಹೊಳಿ

Share this with Friends

ಬೆಳಗಾವಿ:ಹೈಕಮಾಂಡ್ ನಿರ್ದೇಶನದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆಯಾಗಿದ್ದು ನಾಳೆ ಡಿಸಿಎಂ ನಿವಾಸದಲ್ಲಿನ ಸಭೆಯ ನಂತರ ಉಭಯ ನಾಯಕರು ಏನು ಹೇಳುತ್ತಾರೆ ಎನ್ನುವ ಕುತೂಹಲ ನಮಗೂ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಸ್ತುತ ರಾಜ್ಯ ರಾಜಕೀಯದಲ್ಲಿನ ವಿದ್ಯಮಾನಗಳು ಗೊಂದಲಕಾರಿಯಾಗಿರುವ ಕಾರಣದಿಂದಾಗಿಯೇ ಹೈಕಮಾಂಡ್ ನಾಯಕರು ಸಿಎಂ ಮತ್ತು ಡಿಸಿಎಂಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಸೂಚಿಸಿದ್ದಾರೆ. ಎಲ್ಲಾ ಗೊಂದಲಗಳು ಪರಿಹಾರವಾಗಬೇಕು ಎನ್ನುವುದು ಇದರ ಆಶಯ,ಶಾಂತಿ ವಾತಾವರಣ ಸೃಷ್ಡಿಯಾಗಿ, ಪರಿಸ್ಥಿತಿ ತಿಳಿಯಾಗಬೇಕು ಸರ್ಕಾರ, ಪಕ್ಷ ಸುಗಮವಾಗಿ ನಡೆಯಬೇಕು ಆ ರೀತಿ ಇಬ್ಬರು ನಾಯಕರು ಗೊಂದಲಕ್ಕೆ ತೆರೆ ಎಳೆಯಲು ಪ್ರಯತ್ನ ಮಾಡುತ್ತಿದ್ದಾರೆ.ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ನಾಳೆ ಡಿಸಿಎಂ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಇದೆ ಆ ಸಭೆಯ ನಂತರ ಏನು ಸಂದೇಶ ಕೊಡುತ್ತಾರೆ ಎಂದು ನಾವು ಕೂಡ ಕಾಯುತ್ತಿದ್ದೇವೆ ಎಂದರು.

ಇವರ ಹಂತದಲ್ಲಿ ಮುಗಿದರೆ ಒಳ್ಳೆಯದು ಅಂತಿಮವಾಗಿ ದೆಹಲಿ ಅಂಗಳಕ್ಕೆ ಹೋಗಿಯೇ ಹೋಗಲಿದೆ. ಹೈಕಮಾಂಡ್ ನಿರ್ದೇಶನದ ಮೇಲೆಯೇ ಇವರು ಇಲ್ಲಿ ಸಭೆ ಮಾಡಿದ್ದಾರೆ ಇಲ್ಲಿ ಪರಿಹಾರವಾಗದಿದ್ದಲ್ಲಿ ನಂತರ ಹೈಕಮಾಂಡ್ ಗೆ ಹೋದರು ಹೋಗಬಹುದು ಎಲ್ಲದಕ್ಕೂ ಕಾದು ನೋಡಬೇಕು ನಮ್ಮ ನಾಯಕರು ಏನು ನಿರ್ಧಾರ ಮಾಡುತ್ತಾರೆ ಎಂದು ನಾಳೆ ನೋಡೋಣ ಎಂದರು.

ಸಿಎಂ ಆಗುವ ಸನ್ನಿವೇಶ ಬಂದಿಲ್ಲ:

ಬೆಂಬಲಿಗರು ಹಕ್ಕೊತ್ತಾಯ ಮಾಡುವುದು ಸಹಜ, ಅದರಂತೆ ನಾ‌ನು ಮುಖ್ಯಮಂತ್ರಿಯಾಗಬೇಕು ಎನ್ನುವ ಹೇಳಿಕೆ ನೀಡುತ್ತಿದ್ದಾರೆ ಆದರೆ ಎಲ್ಲವನ್ನೂ ನಮ್ಮ ಪಕ್ಷ ನಿರ್ಧಾರ ಮಾಡಲಿದೆ.ಸಧ್ಯಕ್ಕೆ ಅಂತಹ ಸನ್ನಿವೇಶ ಇನ್ನು ಉಗಮವಾಗಿಲ್ಲ ಮುಂದೆ ನೋಡೋಣ ಎಂದರು.

ಸಿಎಂ,ಡಿಸಿಎಂ ಟ್ವೀಟ್ ವಾರ್ ಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ,ರಾಜಕೀಯದಲ್ಲಿ ಇದೆಲ್ಲಾ ಸಹಜ, ಈ ಹಿಂದಿನ ಸರ್ಕಾರದಲ್ಲಿಯೂ ಟ್ಚೀಟ್ ವಾರ್ ನಡೆದಿದೆ, ಕೇಂದ್ರದಲ್ಲಿಯೂ ನಡೆದಿದೆ,ರಾಜ್ಯದಲ್ಲಿಯೂ ನಡೆದಿದೆ, ಬಿಜೆಪಿಯಲ್ಲಿಯೂ ನಡೆದಿದೆ. ರಾಜಕೀಯ ಪಕ್ಷ ಎಂದರೆ ಇದೆಲ್ಲಾ ಸಹಜ, ಬಿಜೆಪಿಯಲ್ಲಿ ಈಗಲೂ ರಾಜ್ಯ ಬಿಜೆಪಿ ನಾಯಕರು ಮತ್ತು ಯತ್ನಾಳ್ ನಡುವೆ ವಾರ್ ನಡೆಯುತ್ತಿಲ್ಲವೇ? ಎಂದರು.


Share this with Friends

Related Post