Fri. Jan 10th, 2025

ಮೈತ್ರಿ ಸಾಧನೆ ಮಾಡಿದ್ದೇವೆ:ಮೋದಿ ಬಣ್ಣನೆ

Share this with Friends

ನವದೆಹಲಿ,ಜೂ.7: ಭಾರತದ ಮೈತ್ರಿ ಇತಿಹಾಸದಲ್ಲಿ ಎನ್‌ಡಿಎ ರೀತಿ ಯಾವುದೇ ಚುನಾವಣಾ ಪೂರ್ವ ಮೈತ್ರಿ ಸಫಲವಾಗಿಲ್ಲ, ಆದರೆ ನಾವು ಮೈತ್ರಿ ಸಾಧನೆ ಮಾಡಿದ್ದೇವೆ, ಇದು ಮೈತ್ರಿಯ ವಿಜಯ ಎಂದು ಮೋದಿ ಬಣ್ಣಿಸಿದರು.

ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಎನ್‌ಡಿಎ ಸಂಸತ್‌ ಸದಸ್ಯರ ಸಭೆಯಲ್ಲಿ ಮಾತನಾಡಿದ ಮೋದಿ,ನಾವು ಮೈತ್ರಿ ಸಾಧಿಸಿ ಬಹುಮತ ಪಡೆದಿದ್ದೇವೆ ಎಂದು ಹೇಳಿದರು.

ಸರ್ಕಾರ ನಡೆಸಲು ಬಹುಮತ ಅವಶ್ಯಕತೆ ಇದೆ,ಇದು ಪ್ರಜಾಪ್ರಭುತ್ವ ನಿಯಮ, ಆದರೆ ದೇಶ ನಡೆಸಲು ಸರ್ವಾನುಮತ ಮುಖ್ಯ, ಸರ್ವಾನುಮತದಿಂದ ದೇಶವನ್ನು ಮುನ್ನಡೆಸುಕೊಂಡು ಹೋಗುತ್ತೇವೆ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.

ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಮ್ಮಿ, 22 ರಾಜ್ಯಗಳಲ್ಲಿ ಸರ್ಕಾರ ನಡೆಸಲು ಎನ್ ಡಿ ಎಗೆ ಜನರು ಆಶೀರ್ವಾದ ನೀಡಿದ್ದಾರೆ. ನಮ್ಮ ಮೈತ್ರಿ ಭಾರತದ ಆತ್ಮ ಎಂದು ಹೇಳಿದರು.

ಎನ್‌ಡಿಎ ಒಕ್ಕೂಟ ರಚನೆಯಾಗಿ ಮೂರು ದಶಕಗಳಾಗಿದೆ. ಇಂತಹ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ, ವಿವಿಧತೆ ಇರುವ ದೇಶದಲ್ಲಿ ಸಾಮಾನ್ಯ ಮಾತಲ್ಲ. ಇದು ಅತ್ಯಂತ ಯಶಸ್ವಿ ಮೈತ್ರಿಯಾಗಿದೆ,
ಎನ್‌ಡಿಎ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿ ಶ್ಲಾಘಿಸಿದರು.


Share this with Friends

Related Post