ಮೈಸೂರು, ಜುಲೈ.1:ಇಂದಿನ ಜಗತ್ತಿನ ಅವಶಕತೆಗೆ ತಕ್ಕಂತೆ ಇಂಗ್ಲಿಷ್,ಹಿಂದಿ ಅಥವಾ ಯಾವುದೇ ಭಾಷೆಯನ್ನು ಕಲಿತರೂ ಮಾತೃ ಭಾಷೆ ಕನ್ನಡವನ್ನು ಮರೆಯಬಾರದು ಎಂದು
ಸಮಾಜ ಸೇವಕರೂ,ಕಾಂಗ್ರೆಸ್ ಮುಖಂಡರಾದ ಎನ್. ಎಂ ನವೀನ್ ಕುಮಾರ್ ಹೇಳಿದರು.
ಮೈಸೂರು ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಸ್ ಎಸ್ ಕಲಾ ಸಂಭ್ರಮ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸೇವಾ ಪ್ರಶಸ್ತಿ ಪ್ರದಾನ ಮತ್ತು ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಯಾವುದೇ ಭಾಷೆ ಯನ್ನು ಕಲಿತರು ಸಹ ನಮ್ಮ ಮಾತೃ ಭಾಷೆ ಕನ್ನಡವನ್ನು ಉತ್ತಮವಾಗಿ ಕಲಿತು,ಕನ್ನಡಕ್ಕೆ ಅಗ್ರ ಸ್ಥಾನವನ್ನು ನೀಡಬೇಕು ಹಾಗೂ ನಮ್ಮತನ ವನ್ನು ಎಂದಿಗೂ ಬಿಟ್ಟುಕೊಡಬಾರದೆಂದು ಹೇಳಿದರು.
ಸಮಾಜ ಸೇವಕರಾದ ಕುರುಬರಹಳ್ಳಿ ಧನಪಾಲ್ ಸೇರಿದಂತೆ ಅನೇಕ ಸಾಧಕರನ್ನು ಇದೇ ವೇಳೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್,ಕನ್ನಡ ಲೋಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ,
ಅವಧೂತ ಮಹರ್ಷಿ ಸಿದ್ದಾರ್ಥಸ್ವಾಮೀಜಿ,
ಸಾಹಿತಿಗಳಾದ ಮಂಜುಳಾ ಪಾವಗಡ, ಡಾ.ನಾಗರಾಜ ತಂಬ್ರಹಳ್ಳಿ ಸೇರಿದಂತೆ ಅನೇಕ ಸಾಹಿತಿಗಳು ಮತ್ತು ಸಮಾಜಸೇವಕರು ಭಾಗವಹಿಸಿದ್ದರು.