ಚಿಕ್ಕಮಗಳೂರು,ಜೂ.8: ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂಬುದು ಯಾರಿಗೂ ತಿಳಿಯದು,ಆದರೆ ಕೆಲವು ಸಾವನ್ನ ನೋಡಿದಾಗ ಈ ಸಾವು ನ್ಯಾಯಾನಾ ಅನ್ನಿಸದಿರದು.
ಇದಕ್ಕೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲುವಿನಲ್ಲಿ ನಡೆದಿರುವ ಘಟನೆ ಸಾಕ್ಷಿಯಾಗಿದೆ.
ಮರ ಕಡಿಯಲು ಅಪ್ಪ-ಮಗ ಹೆಗ್ಗುಡ್ಲು ಎಸ್ಟೇಟಿಗೆ ಬಂದಿದ್ದರು,
ಮರ ಕಡಿಯುವಾಗ ಕಟ್ಟಾದ ಮರ ಮಗನ ಮೇಲೆಯೇ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಬ್ದುಲ್ ಅಜೀಜ್ (20) ಮೃತಪಟ್ಟ ಮಗ.ಈ ನತದೃಷ್ಟರು ಕೇರಳದಿಂದ ಟಿಂಬರ್ ಕಡಿಯಲು ಬಂದಿದ್ದರು.
ಅಪ್ಪ ಮರ ಕತ್ತರಿಸುತ್ತಿದ್ದಾಗ ಪುತ್ರ ಕೆಳಗೆ ನಿಂತಿದ್ದ ವೇಳೆ ಮರ ಆಕಸ್ಮಿಕವಾಗಿ ಅಬ್ದುಲ್ ಅಜೀಜ್ ಮೇಲೆ ಬಿದ್ದಿದೆ ನಿಜಕ್ಕೂ ಈ ಸಾವಿಗೆ ಏನು ಹೇಳಬೇಕೊ ತಿಳಿಯದು.
ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.