Sun. Dec 22nd, 2024

ಅನಾರೋಗ್ಯದಿಂದ ಪತ್ನಿ ಆತ್ಮಹತ್ಯೆ: ಸುದ್ದಿ ತಿಳಿದು ಆಘಾತದಿಂದ ಪತಿ ಕೂಡಾ ಸಾವು

Share this with Friends

ಮೈಸೂರು,ಮಾ.31: ಆತ್ಮಹತ್ಯೆಗೆ ಶರಣಾದ ಪತ್ನಿಯ ಸಾವಿನ ಸುದ್ದಿ ತಿಳಿದು ಶಾಕ್ ನಿಂದ ಹೃದಯಾಘಾತವಾಗಿ ಪತಿ ಕೂಡಾ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀರಾಂಪುರದಲ್ಲಿ‌ ಈ ಘಟನೆ ನಡೆದಿದ್ದು,ವಿಜಯಲಕ್ಷ್ಮಿ(52) ಆತ್ಮಹತ್ಯೆ ಮಾಡಿಕೊಂಡ ಪತ್ನಿ. ಹೃದಯಾಘಾತ ದಿಂದ ಪತಿ ಮಂಜುನಾಥ್(58) ಮೃತಪಟ್ಟ ದುರ್ದೈವಿ.

ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದರು.ಚಿಕಿತ್ಸೆ ಪಡೆದರೂ ಗುಣವಾಗದ ಕಾರಣ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ಮಂಜುನಾಥ್ ಗೆ ಹೃದಯಾಘಾತವಾಗಿದೆ,
ತಕ್ಷಣ ಮಂಜುನಾಥ್ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರೂ ಕೂಡಾ ಮೃತಪಟ್ಟಿದ್ದಾರೆ.

ಅಶೋಕಾಪುರಂನ ರೈಲ್ವೆ ವರ್ಕ್ ಷಾಪ್ ನಲ್ಲಿ ಮಂಜುನಾಥ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.ದಂಪತಿಗೆ ಇಬ್ಬರು ಮಕ್ಕಳಿದ್ದು ಮಗ ಅಮೆರಿಕದಲ್ಲಿ ನೆಲೆಸಿದ್ದರೆ,ಮಗಳು ಮೈಸೂರಿನಲ್ಲೇ ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ವಿಜಯ ಲಕ್ಷ್ಮಿ ಆತ್ಮಹತ್ಯೆ ‌ಕುರಿತು ಕುವೆಂಪುನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post