Wed. Dec 25th, 2024

ಬೈಕ್ ನಲ್ಲಿ ಬೇರೆಯವರ ಜೊತೆ ಹೊರಟ ಪತ್ನಿ:ವ್ಯಕ್ತಿಯ ಕೊಂದ ಪತಿ

Share this with Friends

ಬೆಳಗಾವಿ,ಜು.22: ಪತ್ನಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಕಂಡ ಪತಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವ್ಯಕ್ತಿಯ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಲಕ್ಷ್ಮೀಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,
ಮೌಲಾಸಾಬ್ ಯಾಸಿನ್ ಮೊಮಿನ್ (28) ಕೊಲೆಯಾದ ದುರ್ದೈವಿ.

ಈತನೊಂದಿಗೆ ಅಮೋಘ ಢವಳೇಶ್ವರನ ಪತ್ನಿ ಶಿಲ್ಪಾ ಬೈಕಿನಲ್ಲಿ ಹೋಗುತ್ತಿದ್ದರು. ಆಗ ಲಾಂಗ್ ಹಿಡಿದು ಬಂದ ಅಮೋಘ ಢವಳೇಶ್ವರ ಇಬ್ಬರ ಮೇಲೂ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ.

ಆಗ ಮೌಲಾಸಾಬ್‌‌ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ, ಅಮೋಘ ಢವಳೇಶ್ವರನನ್ನು ಕುಲಗೋಡ ಠಾಣಾ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post