Mon. Dec 23rd, 2024

ಜನಸೇವಕ ಯುವ ಬ್ರಿಗೇಡ್ ನಿಂದ ಗಿಡ ನೆಟ್ಟು ಕಾರ್ಮಿಕರ ದಿನಾಚರಣೆ

Share this with Friends

ಮೈಸೂರು, ಮೇ.1: ಜನಸೇವಕ ಯುವ ಬ್ರಿಗೇಡ್ ವತಿಯಿಂದ ಮೈಸೂರಿನ ಅರವಿಂದ ನಗರದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯನ್ನು ಗಿಡ ನೆಟ್ಟು ಆಚರಿಸಲಾಯಿತು.

ಇದೇ‌ ವೇಳೆ ಸಿಹಿ ವಿತರಿಸಿ ಅರ್ಥಪೂರ್ಣವಾಗಿ ಕಾರ್ಮಿಕರ ದಿನಾಚರಣೆ ಆಚರಿಸಿ ಎಲ್ಲಾ ಕಾರ್ಮಿಕರಿಗೆ ಶುಭ ಹಾರೈಸಿದರು.

ಜನಸೇವಕ ಯುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಮಹೇಶ್ ಕುಮಾರ್ ಮಾತನಾಡಿ, ಶ್ರಮ ಸಂಸ್ಕೃತಿಯ ಪ್ರತಿನಿಧಿಗಳಾಗಿ, ಹಗಲಿರಳು ಕಷ್ಟಪಟ್ಟು ದುಡಿಯುವ ಕಾರ್ಮಿಕರು ದೇಶದ ಅಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.

ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದಾಗಿದೆ, ಕಾರ್ಮಿಕರಿಗೆ ಗೌರವಯುತ ಬದುಕು ಕಟ್ಟಿಕೊಡಬೇಕು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಹೇಶ್ ಕುಮಾರ್ ಮನವಿ ಮಾಡಿದರು.

ಅಧ್ಯಕ್ಷ ರಾಘವೇಂದ್ರ, ಬಿಜೆಪಿ ಮುಖಂಡರಾದ ನಂಜುಂಡಸ್ವಾಮಿ, ಶಿವಕುಮಾರ್ ,ಮೋಹನ್, ಕುಮಾರ್ , ನಿಹಾಲ್, ಬಾಲಾಜಿ ನಾಯಕ್,
ಮತ್ತಿತರರು ಹಾಜರಿದ್ದರು.


Share this with Friends

Related Post