Tue. Dec 24th, 2024

ಮಹಿಳೆಗೆ ದೂರದ ಸಂಬಂಧಿಯಿಂದ ಬ್ಲಾಕ್ ಮೇಲ್:ದೂರು ದಾಖಲು

Share this with Friends

ಮೈಸೂರು,ಮೇ.8: ಮಹಿಳೆಯ ವಾಯ್ಸ್ ರೆಕಾರ್ಡ್ ಹಾಗೂ ನಡವಳಿಕೆಯ ಫೋಟೋಗಳನ್ನ‌ ಕುಟುಂಬಕ್ಕೆ ಕಳುಹಿಸಿ ಗೌರವಕ್ಕೆ ಧಕ್ಕೆ ತರುವುದಾಗಿ ಬ್ಲಾಕ್ ಮೇಲ್ ಮಾಡಿದ ಸಂಬಂಧಿ ವಿರುದ್ಧ ದೂರು ದಾಖಲಾಗಿದೆ.

ನಾನು ಕರೆದಾಗ ಬರಬೇಕು ಇಲ್ಲದಿದ್ದಲ್ಲಿ ವ್ಯವಹಾರಕ್ಕಾಗಿ ಕೊಟ್ಟ ಸಾಲದ ಹಣ ಹಿಂದಿರುಗಿಸಬೇಕು.ತಪ್ಪಿದರೆ ನಿಮ್ಮ ಕುಟುಂಬದವರಿಗೆ ಫೋಟೋಗಳನ್ನ ಕಳುಹಿಸುತ್ತೇನೆ ಎಂದು ಸಂಬಂಧಿ ಧಂಕಿ ಹಾಕಿದ್ದಾನೆ.

ಬ್ಲಾಕ್ ಮೇಲ್ ಮಾಡಿರುವ ಆರೋಪಿಗೆ ಮತ್ತೊಂದು ಮಹಿಳೆ ಸಾಥ್ ನೀಡಿದ್ದಾಳೆ.ಇಬ್ಬರ ಮೇಲೂ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಕೃಷ್ಣನಗರದಲ್ಲಿ ಬಾಟಿಕ್ ನಡೆಸುತ್ತಿರುವ ಮಹಿಳೆಗೆ ದೂರದ ಸಂಭಂಧಿಯಾದ ಕೊಯಮತ್ತೂರಿನ ಉಮಾಪತಿ ಹತ್ತಿರವಾಗಿದ್ದ.

ಕೊಯಮತ್ತೂರಿನಲ್ಲಿ ಬುಸಿನೆಸ್ ಮನ್ ಆಗಿರುವ ಉಮಾಪತಿ ಮಹಿಳೆಗೆ ಸಾಕಷ್ಟು ಬಾರಿ ಆರ್ಥಿಕ ನೆರವು ನೀಡಿದ್ದಾರೆ.ಈ ಮಧ್ಯೆ ಮೈಸೂರಿನ ರಾಮಕೃಷ್ಣನಗರದ ನಿವಾಸಿ ಶೀಲಾಗೋಪಾಲ್ ಎಂಬುವರನ್ನ ಮಹಿಳೆ ಉಮಾಪತಿಗೆ ಪರಿಚಯಿಸಿದ್ದಾರೆ.

ಶೀಲಾಗೋಪಾಲ್ ಹಾಗೂ ಉಮಾಪತಿ ಆತ್ಮೀಯರಾಗಿದ್ದಾರೆ.ಈ ಬೆಳವಣಿಗೆ ನಂತರ ಮಹಿಳೆ ಹಾಗೂ ಶೀಲಾಗೋಪಾಲ್ ನಡುವೆ ಮನಸ್ಥಾಪವಾಗಿದೆ.ಮಹಿಳೆಯ ನಡವಳಿಕೆ ಬಗ್ಗೆ ಶೀಲಾಗೋಪಾಲ್ ಉಮಾಪತಿ ಬಳಿ ತಿಳಿಸಿದ್ದಾರೆ.

ಈ ವೇಳೆ ಉಮಾಪತಿ ಮಹಿಳೆಗೆ ಫೋನ್ ಮಾಡಿ ನೀನು ಬೇರೆಯವರ ಜೊತೆ ಸಂಭಂಧ ಬೆಳೆಸಿದ್ದೀಯ,ನಾನು ಕರೆದಾಗ ಬರಬೇಕು ಎಂದು ಬೆದರಿಕೆ ಹಾಕಿದ್ದಾರೆ.ಆಗ ಮಹಿಳೆಯ ಮಗಳು ಉಮಾಪತಿಯ ನಂಬರ್ ಬ್ಲಾಕ್ ಮಾಡಿದ್ದಾರೆ.

ನಂತರ ವಿದೇಶದಲ್ಲಿ ತಂಗಿರುವ ಮತ್ತೊಬ್ಬ ಮಗಳ ಮೊಬೈಲ್ ಗೆ ಫೋನ್ ಮಾಡಿ ನಾನು ಕೊಟ್ಟ ಹಣ ಹಿಂದಿರುಗಿಸಬೇಕು ಇಲ್ಲದಿದ್ದಲ್ಲಿ ನಿಮ್ಮ ತಾಯಿಯ ನಡವಳಿಕೆಯ ವಾಯ್ಸ್ ರೆಕಾರ್ಡ್ ಗಳು ಹಾಗೂ ಫೋಟೋಗಳನ್ನ ಇಡೀ ಕುಟುಂಬಕ್ಕೆ ಕಳುಹಿಸಿ ಗೌರವಕ್ಕೆ ಮಸಿ ತಗುಲುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ.

ಇದೀಗ ಮಹಿಳೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಉಮಾಪತಿ ಹಾಗೂ ಶೀಲಾ ಗೋಪಾಲ್ ವಿರುದ್ದ ದೂರು ನೀಡಿದ್ದಾರೆ.


Share this with Friends

Related Post