Tue. Dec 24th, 2024

ಮಹಿಳೆ ಕಿಡ್ನಾಪ್ ಪ್ರಕರಣ- ಹೆಚ್‌.ಡಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Share this with Friends

ಬೆಂಗಳೂರು,ಮೇ.4: ಮಹಿಳೆಯ ಅಪಹರಣ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

ಅಪಹರಣ ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಸುಮಾರು 2 ಗಂಟೆಗಳ ವಿಚಾರಣೆ ನಡೆಸಿದ ಕೋರ್ಟ್‌ ಕೆಲ ಕಾಲ ತೀರ್ಪು ಕಾಯ್ದಿರಿಸಿತ್ತು.

ಸಂಜೆ 6.25ರ ಸುಮಾರಿಗೆ ಆದೇಶ ಪ್ರಕಟಿಸಿತು,ಹಾಗಾಗಿ‌ ಸಧ್ಯಕ್ಕೆ ರೇವಣ್ಣ ಅವರಿಗೆ ರಿಲೀಫ್‌ ಸಿಕ್ಕಿಲ್ಲ.
ಪ್ರಕರಣ ಗಂಭೀರ ವಿಚಾರವನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ ಹೀಗಾಗಿ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಎಸ್ ಪಿ ಪಿ ಜಗದೀಶ್‌ ಮನವಿ ಮಾಡಿದರು.

ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ನಾಯ್ಕ್‌ ಆಕ್ಷೇಪಣೆ ವ್ಯಕ್ತಪಡಿಸಿದರು. ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸುವುದಾಗಿದೆ ಆದರೆ ಇಲ್ಲಿ ಅಂತಹ ದೊಡ್ಡ ಪ್ರಕರಣ ಏನಿಲ್ಲ ಎಂದು ತಿಳಿಸಿದರು.

ಆದರೆ ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಕೋರ್ಟ್ ಆದೇಶ ಹೊರಡಿಸಿತು.


Share this with Friends

Related Post