Mon. Dec 23rd, 2024

ಬೆಂಗಳೂರಿಗರೇ ಕಾರು, ಬೈಕ್ ತೊಳೆಯೋ ಮುನ್ನ ಓದಿ ಈ ಸುದ್ದಿ : ಕಾವೇರಿ ನೀರಿನಲ್ಲಿ ಕಾರು ತೊಳೆದು 5000 ರೂ ದಂಡ ಕಟ್ಟಿದ ಮಹಿಳೆ

Share this with Friends

ಬೆಂಗಳೂರು, ಮಾ.24: ಬೆಂಗಳೂರಿನ ಜನರೇ ಕಾರು, ಬೈಕ್ ತೊಳೆಯೋ ಮುನ್ನ ನೀವು ಈ ಸುದ್ದೀನ ಓದಲೇಬೇಕಿದೆ.

ಸಿಲಿಕಾನ್ ಸಿಟಿ,ರಾಜ್ಯದ ರಾಜ್ಯಧಾನಿ ಬೆಂಗಳೂರಿನಲ್ಲಿ ಕಡಿಯೋದಕ್ಕೇ ನೀರಿಲ್ಲದೆ ಜನ ಪರದಾಡುತ್ತಿದ್ದರೆ ಇತ್ತ ಮಹಿಳೆಯೊಬ್ಬರು ಕಾರು‌ ತೊಳೆದು ದಂಡ ಪೀಕಿದ್ದಾರೆ.

ಕಾವೇರಿ ನೀರಿನಿಂದ ಕಾರನ್ನು ತೊಳೆದುದಕ್ಕೆ ಮಹಿಳೆ ಸೀರಿ ಮೂರು ಮಂದಿಗೆ ತಲಾ 5 ಸಾವಿರ ರೂ ದಂಡ ವಿಧಿಸಲಾಗಿದೆ.

ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಇರುವುದರಿಂದ ಸರ್ಕಾರ‌,ಜಲಮಂಡಳಿ ಹಾಗೂ ಬಿಬಿಎಂಪಿ ಅನಗತ್ಯವಾಗಿ ನೀರು ಪೋಲು ಮಾಡಬೇಡಿ ಎಂದು ಪದೇ,ಪದೇ ಮನವಿ ಮಾಡಿದ್ದವು.

ಆದರೂ ಜನ ಕೇಳದ ಹಿನ್ನೆಲೆಯಲ್ಲಿ ದಂಡಂ‌ ದಶಗುಣಮ್‌ ಎಂಬಂತೆ ನೀರು ಪೋಲು ಮಾಡುವವರಿಗೆ ದಂಡ‌ ವಿಧಿಸಲಾಗುತ್ತಿದೆ.ಇಷ್ಟಾದರೂ ಎಚ್ಚೆತ್ತುಕೊಳ್ಳದವರಿಗೆ ಏನು ಹೇಳಬೇಕೊ ತಿಳಿಯದಾಗಿದೆ.

ನೀರಿನ ಅಭಾವದ ಹಿನ್ನೆಲೆ ಮಿತವಾಗಿ ನೀರು ಬಳಸುವ ಬಗ್ಗೆ ಜಾಗೃತ ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕಾವೇರಿ ನೀರಿನಲ್ಲಿ ಕಾರು ತೊಳೆಯತ್ತಿದ್ದರಿಂದ ಬೆಂಗಳೂರು ಜಲಮಂಡಳಿ ಮೂರು ಮಂದಿಗೆ ದಂಡ ವಿಧಿಸಿದೆ.

ಸದಾಶಿವನಗರದಲ್ಲಿ ಕಾವೇರಿ ನೀರಿನಿಂದ ಕಾರ್ ತೊಳೆದ ಮಹಿಳೆಗೆ 5,000 ದಂಡ ವಿಧಿಸಿ, ಜಲಮಂಡಳಿ ಅಧಿಕಾರಿಗಳು ಮುಲಾಜಿಲ್ಲದೆ ಸ್ಥಳದಲ್ಲೇ ದಂಢ ಪೀಕಿಸಿದ್ದಾರೆ.

ಅದೇ ರೀತಿ ಮಹಾದೇವಪುರ ಮತ್ತು ಡಾಲರ್ಸ್ ಕಾಲೋನಿಯಲ್ಲೂ ಕೂಡ ಇಬ್ಬರಿಗೆ ದಂಡ ವಿಧಿಸಿದ್ದಾರೆ.

ಕಾವೇರಿ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಕಟ್ಟುನಿಟ್ಟಿನ ಸೂಚನೆ ನೀಡಿದೆ,ಸರ್ಕಾರ ಕೂಡಾ ಮಿತವಾಗಿ ನೀರು ಬಳಸುವಂತೆ ಮನವಿ ಮಾಡಿದೆ.

ಕಾರು, ಬೈಕು ತೊಳೆಯಲು, ಹೂ ತೋಟಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಲಾಗಿದೆ.

ಆದರೂ ಕಾರನ್ನು ಕಾವೇರಿ ನೀರಿನಿಂದ‌ ತೊಳೆದು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬುದ್ದು ಮಹಿಳೆ ಹಾಗೂ ಇಬ್ಬರು ತಲಾ ಐದು ಸಾವಿರ ದಂಡ ಕಟ್ಟಿದ್ದಾರೆ.


Share this with Friends

Related Post