ಮೈಸೂರು, ಮೇ 23: ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ, ಆಡಿಯೋವನ್ನ ಇನ್ಸ್ಟಾಗ್ರಾಂ ನಲ್ಲಿ ಐಡಿ ಕ್ರಿಯೇಟ್ ಮಾಡಿ ಅಪ್ ಲೋಡ್ ಮಾಡಿ ಮಾನಸಿಕ ಕಿರುಕುಳ ನೀಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಬನ್ನಿಮಂಟಪದ ಅಲೀಂನಗರದಲ್ಲಿ ಇಂತಹ ಘಟನೆ ನಡೆದಿದ್ದು,
ನೊಂದ ಮಹಿಳೆ ಆರೋಪಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೊಂದ ಮಹಿಳೆ ನಾಯ್ಡು ನಗರದ ಮಹಮದ್ ಫೈಜಾನ್ ಎಂಬಾತನ ಜೊತೆ ಎರಡು ವರ್ಷಗಳ ಕಾಲ ರಿಲೇಷನ್ ಶಿಪ್ ಇಟ್ಟುಕೊಂಡಿದ್ದರು, ಆತನ ವರ್ತನೆ ಸರಿ ಕಾಣದ ಕಾರಣ ಬ್ರೇಕ್ ಅಪ್ ಮಾಡಿಕೊಂಡಿದ್ದರು.
ನಂತರ ಮಹಿಳೆ ತಮ್ಮ ಕಸೀನ್ ಜೊತೆ ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಈ ವೇಳೆ ಇನ್ಸ್ಟಾಗ್ರಾಂ ನಲ್ಲಿ ಖಾತೆ ತೆರೆದ ವ್ಯಕ್ತಿಯೊಬ್ಬ ಮಹಿಳೆಯ ವೈಯುಕ್ತಿಕ ಫೋಟೋಗಳನ್ನ ಅಪ್ ಲೋಡ್ ಮಾಡಿದ್ದಾನೆ
ನಂತರ ಮತ್ತೊಂದು ಖಾತೆ ತೆರೆದು ಮಹಿಳೆಯ ಗಂಡ ಹಾಗೂ ಎಕ್ಸ್ ಬಾಯ್ ಫ್ರೆಂಡ್ ಫೋಟೊಗಳನ್ನೂ ಅಪ್ ಲೋಡ್ ಮಾಡಿದ್ದಾನೆ.
ಈ ಬೆಳವಣಿಗೆಯಿಂದ ಪತಿ ಮಹಿಳೆಗೆ ವಿಚ್ಛೇದನ ನೀಡಿದ್ದಾರೆ, ನಂತರ ತನ್ನ ಎಕ್ಸ್ ಬಾಯ್ ಫ್ರೆಂಡ್ ಫೋಟೋಗಳನ್ನ ಅಪ್ ಲೋಡ್ ಮಾಡಿರುವುದನ್ನ ಮಹಿಳೆ ಖಚಿತಪಡಿಸಿಕೊಂಡಿದ್ದಾರೆ.
ಈ ವಿಚಾರ ತಿಳಿದ ನಂತರ ಬಾಯ್ ಫ್ರೆಂಡ್ ತನನ್ನ ಮದುವೆ ಆಗುವಂತೆ ಒತ್ತಾಯಿಸಿದ್ದು ಬೆತ್ತಲೆ ಫೋಟೋಗಳನ್ನ ಅಪ್ ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ.
ಇದರಿಂದ ಹೆದರಿದ ಮಹಿಳೆ ಸಂಪರ್ಕ ಕಡಿದುಕೊಂಡಿದ್ದಾರೆ,ಆಗ ಮತ್ತೊಂದು ಹೆಸರಲ್ಲಿ ಐಡಿ ಕ್ರಿಯೇಟ್ ಆಗಿ ಮಹಿಳೆಯ ವೈಯುಕ್ತಿಕ ಫೋಟೋ,ವಿಡಿಯೋ ಹಾಗೂ ಆಡಿಯೊ ಅಪ್ ಲೋಡ್ ಮಾಡಲಾಗಿದೆ.
ಇದನ್ನ ಸಂಬಂಧಿಕರು,ಕುಟುಂಬಸ್ಥರು,
ಸ್ನೇಹಿತರು ಹಾಗೂ ನೆರೆಹೊರೆಯವರಿಗೆ ಸೆಂಡ್ ಮಾಡಿ ಮಹಿಳೆಗೆ ಮಾನಸಿಕ ಕಿರುಕುಳ ನೀಡಿದ್ದಾನೆ
ನೊಂದ ಮಹಿಳೆ ತನ್ನ ಎಕ್ಸ್ ಬಾಯ್ ಫ್ರೆಂಡ್ ವಿರುದ್ದ ಪ್ರಕರಣ ದಾಖಲಿಸಿ ವಿಡಿಯೋ ಫೋಟೋಗಳನ್ನ ಅಪ್ ಲೋಡ್ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.