Tue. Dec 24th, 2024

ಮಹಿಳೆಯರು ಪ್ರೋತ್ಸಾಹಕ್ಕೆ ಕಾಯದೆ ಗುರಿ ತಲುಪಿ: ಡಾ.ಆರ್ ಎಚ್ ಪವಿತ್ರ ಕರೆ

Share this with Friends

ಮೈಸೂರು, ಮಾ.11: ಮಹಿಳೆಯರು ಪ್ರೋತ್ಸಾಹಕ್ಕೆ ಕಾಯುತ್ತಾ ಕೂರದೆ ತಮ್ಮ ಗುರಿ ತಲುಪಲು ಯತ್ನಿಸಬೇಕು ಎಂದು
ಕರ್ನಾಟಕ ರಾಜ್ಯ ಮುಕ್ತ ವಿವಿ ಅರ್ಥ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಆರ್ ಎಚ್ ಪವಿತ್ರ ಹೇಳಿದರು

ನಗರದ ಎಂ ಜಿ ರಸ್ತೆಯಲ್ಲಿರುವ ಸಿಪಾಯಿ ಗ್ರಾಂಡ್ ಹೋಟೆಲ್ ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವು ಜಿಲ್ಲೆಯ ವಿವಿಧ ಕ್ಷೇತ್ರದ 35 ಸಾಧಕ ಮಹಿಳೆಯರಿಗೆ ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಗಳಲ್ಲಿ ಹೆಣ್ಣು ಮಕ್ಕಳನ್ನು ತಾರತಮ್ಯ ಮಾಡದೆ ಗಂಡುಮಕ್ಕಳಂತೆಯೇ ಸಮಾನತೆಯಿಂದ ಬೆಳೆಸುವುದು ಮುಖ್ಯ,
ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡುವ ಪುರುಷರಿಗೆ ಮಹಿಳೆಯರು ಧನ್ಯವಾದ ತಿಳಿಸಬೇಕು, ಪ್ರತಿ ಮಹಿಳೆ ವಿಶ್ವ ಮಹಿಳಾ ದಿನಾಚರಣೆಗೆ ನನ್ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಬೇಕು ಎಂದು ತಿಳಿಸಿದರು,

ಸಂಚಾರಿ ಎಸಿಪಿ ಪರಶುರಾಮಪ ಮಾತನಾಡಿ
ವಿವಿಧ ರಂಗಗಳಲ್ಲಿ
ದುಡಿಯುವ ಮಹಿಳೆಯರು ತಾಳ್ಮೆಗೆ ಹೆಸರಾಗಿದ್ದು, ಮಹಿಳೆಯರಿಗೆ ಸರ್ವಕಾಲದಲ್ಲೂ ಗೌರವ ಸಲ್ಲಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾ ನಂದೀಶ್, ಮಾತೃ ಮಂಡಳಿ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಲತಾ ಚಂದ್ರಶೇಖರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಖ್ಯಾತ ನೃತ್ಯ ಶಿಕ್ಷಕಿ ವಂದಿತಾ ರೈ, ಮಾತೃ ಮಂಡಳಿ ಸಂಘದ ಅಧ್ಯಕ್ಷೆ ಪುಷ್ಪಲತಾ ಚಂದ್ರಶೇಖರ್, ಸಮಾಜ ಸೇವಕರಾದ ಡಾಕ್ಟರ್ ಶಾಂತಾ ರಾಮಕೃಷ್ಣ, ಸರಿಗಮಪ ಚಾಂಪಿಯನ್ ತೀರ್ಪುಗಾರರಾದ ಶ್ರುತಿ,ಶ್ರೀ ದುರ್ಗ ಫೌಂಡೇಶನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಬಳ್ಳಾರಿ ಮೊರಾರ್ಜಿ
ಶಾಲೆಯ ಪ್ರಾಂಶುಪಾಲರಾದ ಅನುಸೂಯ, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post