Mon. Dec 23rd, 2024

ಎಲ್ಲ ಕ್ಷೇತ್ರದಲ್ಲೂ ತೊಡಗುವ ಶಕ್ತಿ ಮಹಿಳೆಯರಲ್ಲಿದೆ: ಪದ್ಮಜಾ ಶ್ರೀನಿವಾಸ್

Share this with Friends

ಮೈಸೂರು, ಮಾ.7: ದೇಶದಲ್ಲಿ ಮಹಿಳೆಯರು ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಜಾಗೃತರಾಗುತ್ತಿದ್ದಾರೆ ಎಂದು ಒಕ್ಕಲಿಗ ಲೇಡೀಸ್ ಅಸೋಸಿಯೇಷನ್ ಅಧ್ಯಕ್ಷೆ ಪದ್ಮಜಾ ಶ್ರೀನಿವಾಸ್ ಹೇಳಿದರು.

ಅಲ್ಲದೇ ಎಲ್ಲ ಕ್ಷೇತ್ರದಲ್ಲೂ ಧೈರ್ಯ, ಆತ್ಮವಿಶ್ವಾಸದಿಂದ ಮುನ್ನುಗ್ಗುವ ಶಕ್ತಿ ಮಹಿಳೆಯರಲ್ಲಿದೆ ಎಂದು ಅವರು ತಿಳಿಸಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮೈಸೂರಿನ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಒಕ್ಕಲಿಗ ಲೇಡೀಸ್ ಅಸೋಸಿಯೇಷನ್
ಹಮ್ಮಿಕೊಂಡ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ, ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾರೆ. ಕುಟುಂಬ ನಿರ್ವಹಣೆ ಹಾಗೂ ಸರ್ಕಾರಿ ಕಚೇರಿ ಕೆಲಸದ ಜೊತೆಗೆ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ನಿರ್ವಹಿಸುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸುವ ಮೂಲಕ ಆಡಳಿತದ ಉನ್ನತ ಹುದ್ದೆಗಳು ದೊರಕುವಂತೆ ಮಾಡಬೇಕು ಎಂದು ಸಲಹೆ ನೀಡಿದರು.

ಸಂಘದ ನಳಿನ ಮಂಜು, ಶೋಭಾ ಮಂಜುನಾಥ್, ಭವ್ಯ ರಘು,ಸುಮಾ ಅನಿಲ್, ವನಿತಾ ರವಿ, ವಿಜಯ ಮಂಜುನಾಥ್, ನವೀನ ರಂಗರಾಜು, ನಮತಾ ಮಂಜುನಾಥ್, ಕಾಲೇಜಿನ ಮುಖ್ಯಸ್ಥರಾದ ಡಾ. ಜಯಪ ಹೊನ್ನಾಳಿ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post