Tue. Dec 24th, 2024

ವಿಶ್ವ ರಕ್ತದಾನಿ ದಿನಾಚರಣೆ:ಸ್ವಯಂ ಪ್ರೇರಿತ ರಕ್ತದಾನ

Share this with Friends

ಮೈಸೂರು, ಜೂ.12: ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಮೈಸೂರಿನಲ್ಲಿ ವಿಶೇಷವಾಗಿ ಆಚರಿಸಲಾಯಿತು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ
ರಕ್ತದಾನ ಮಹಾದಾನ ಗೋ ಬಕ್ತ ಸಂಘಟನೆ ಟ್ರಸ್ಟ್ ಹಾಗೂ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಮತ್ತು ಕರ್ನಾಟಕ ಕುಮಾವತ್ ಸಮಾಜ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ 50 ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಎಲ್ಲಾ ಬಗೆಯ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಪ್ರಮುಖವಾಗಿದೆ, ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವನವನ್ನು ಉಳಿಸುವ ಮಹದವಕಾಶ ಸಿಗುತ್ತದೆ, ರಕ್ತದಾನ ನೀಡಿದಾತ ದುರ್ಬಲನಾಗುತ್ತಾನೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ತೂಕ ನಿಯಂತ್ರಿಸಬಹುದು, ಕ್ಯಾನ್ಸರ್ ನಂತಹ ರೋಗಗಳು ಬರುವುದನ್ನು ತಪ್ಪಿಸಬಹುದು ಅದು ಮನಸ್ಸಿನ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ ಎಂದು ತಿಳಿಸಿದರು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಡಾ ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ
ಅನೇಕ ಸಂಘಟನೆ ಮತ್ತು ಸರಕಾರೇತರ ಸಂಘಟನೆಗಳ ಶ್ರಮದಿಂದ ಕಳೆದ ದಶಕಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿದೆ. ಆದರೆ ಈ ಜಾಗೃತಿ ಇನ್ನೂ ಹೆಚ್ಚು ವ್ಯಾಪಕವಾಗುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಂಗೀತ ಆಲಿಸುವುದು, ಪ್ರವಾಸ ಮತ್ತು ಇತರ ಹವ್ಯಾಸಗಳಂತೆ ಇತ್ತೀಚೆಗೆ ನಿಯಮಿತವಾಗಿ ರಕ್ತದಾನ ಮಾಡುವುದು ಸಹ ಕೆಲ ಯುವಕರ ಹವ್ಯಾಸವಾಗಿದೆ. ಈ ಬಗೆಯ ಸಕಾರಾತ್ಮಕ ಬೆಳವಣಿಗೆೆಗಳು ಆರೋಗ್ಯ ಕ್ಷೇತ್ರದ ಬಹು ದೊಡ್ಡ ಸವಾಲಾಗಿದ್ದ ರಕ್ತದ ಕೊರತೆ ನೀಗಿಸುತ್ತಿವೆ ಎಂದು ಅಭಿಪ್ರಾಯ ಪಟ್ಟರು.

ಜೀತೋ ಸಂಘಟನೆ ಮೈಸೂರು ಘಟಕದ ಅಧ್ಯಕ್ಷರಾದ ಕಾಂತಿಲಾಲ್ ಚೌಹಾನ್, ಕಾರ್ಯದರ್ಶಿ ಗೌತಮ್ ಸಾಲೇಚಾ
ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆ ಸಂಸ್ಥಾಪಕ ಪಿ ಕರ್ಮರಾಮ್ ಸಿ.ರವಿ,
ಟ್ರಸ್ಟ್ ಅಧ್ಯಕ್ಷ ಬಗ್ದರಾಮ್ ಕುಮಾವತ್
ಕಾರ್ಯದರ್ಶಿ ಚಿರಂಜೇಲಾಲ್ ಕುಮಾವತ್,
ಪತ್ರಕರ್ತ ಜನಕ್ ಸಿಂಗ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post