ಮೈಸೂರು: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಮೈಸೂರಿನ ಪ್ರವಾಸೋದ್ಯಮದ ಹಿರಿಯ ಮಾರ್ಗದರ್ಶಿಗಳನ್ನು (ಗೈಡ್) ಸನ್ಮಾನಿಸಲಾಯಿತು.
ಮೈಸೂರು ಅರಮನೆಯ ವರಹಾ ದ್ವಾರದ ಮುಂಭಾಗ ಹಿರಿಯ ಗೈಡ್ ಶ್ರೀಕಂಠ, ಗುರುಸ್ವಾಮಿ, ಕೆ ಆರ್ ಎಸ್ ರವಿ, ಚಂದ್ರು ,ಶಂಕ್ರಣ್ಣ ಅವರುಗಳನ್ನು ಸನ್ಮಾನಿಸಲಾಯಿತು,
ಈ ವೇಳೆ ಸಮಾಜ ಸೇವಕ ನಜರಬಾದ್ ನಟರಾಜ್ ಮಾತನಾಡಿ ಮೈಸೂರಿನ ಇತಿಹಾಸ, ಪ್ರೇಕ್ಷಣೀಯ ಸ್ಥಳಗಳ ಸಮಗ್ರ ಮಾಹಿತಿಯನ್ನ ಪ್ರವಾಸಿಗರಿಗೆ ತಿಳಿಸಿ ಸುರಕ್ಷಿತವಾಗಿ ಪ್ರತಿದಿನ ಪ್ರವಾಸವನ್ನ ಮಾಡಿಸುವ ಹಿರಿಯ ಮಾರ್ಗದರ್ಶಿಗಳ ಸೇವೆ ಶ್ಲಾಘನೀಯ ಎಂದು ಹೇಳಿದರು.
ಎಷ್ಟೇ ಡಿಜಿಟಲ್ ತಂತ್ರಜ್ಞಾನ ಮುಂದವರೆದರೂ ಸಹ ಪ್ರವಾಸಿ ಮಾರ್ಗದರ್ಶಿಗಳಿಗೆ ಮಾನ್ಯತೆ ಇದ್ದೇ ಇರುತ್ತದೆ ಆದರೂ ಮೈಸೂರಿನ ಪ್ರವಾಸಿ ಮಾರ್ಗದರ್ಶಿ ವೃತ್ತಿಪರರನ್ನ ಪ್ರೋತ್ಸಾಹಿಸಲು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಲಸ್ಕರ್ ಪೊಲೀಸ್ ಠಾಣೆಯ ಪಿಎಸ್ಐ ರಾಧಾ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ,ನಿರೂಪಕ ಅಜಯ್ ಶಾಸ್ತ್ರಿ, ಸಂತೋಷ್ ಕಿರಾಳು, ರವಿಚಂದ್ರ, ವರುಣ ಮಹದೇವ್, ಲೋಕೇಶ್, ದಿನೇಶ್, ಎಸ್ ಎನ್ ರಾಜೇಶ್, ರಾಕೇಶ್, ಹರೀಶ್ ನಾಯ್ಡು, ಶಫಿ ಮತ್ತಿತರರು ಹಾಜರಿದ್ದರು.