Mon. Dec 23rd, 2024

ತಾಯಿಯೊಂದಿಗೆ ತೆರಳಿಯದುವೀರ್ ನಾಮಪತ್ರ‌ ಸಲ್ಲಿಕೆ

Share this with Friends

‌ಮೈಸೂರು, ಏ.1: ಮೈಸೂರು ಕೊಡಗು ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ ‌

ಜಿಲ್ಲಾ ಚುನಾವಣಾಧಿಕಾರಿ ಡಾ: ಕೆ.ವಿ.ರಾಜೇಂದ್ರ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ತಾಯಿ ಪ್ರಮೋದಾದೇವಿ ಒಡೆಯರ್‌, ಶಾಸಕ ಶ್ರೀವತ್ಸ ಮತ್ತಿತರರು ಹಾಜರಿದ್ದರು.

ಈ ಮೊದಲು ಅಭ್ಯರ್ಥಿ ಯದುವೀರ್‌ ಅವರೇ ಖುದ್ದು ವಿಡಿಯೋ ಸಂದೇಶದ ಮೂಲಕ ಏ. ೩ ರಂದು ನಾಮಪತ್ರ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ದಿಢೀರ್‌ ಬೆಳವಣಿಗೆಯಲ್ಲಿ ಇಂದು ಯಾವುದೇ ಸದ್ದುಗದ್ದಲವಿಲ್ಲದೆ ನಾಮಪತ್ರ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಇವತ್ತು ಒಳ್ಳೆಯ‌ ದಿನವೆಂಬ ಕಾರಣದಿಂದ ಯದುವೀರ್ ತಮ್ಮ ತಾಯಿಯವರೊಂದಿಗೆ ಹೋಗಿ ನಾಮಪತ್ರ ಸಲ್ಲಿಸಿದ್ದು,ಏಪ್ರಿಲ್ 3 ರಂದು ಮತ್ತೆ ಬಿಜೆಪಿ ನಾಯಕರೊಂದಿಗೆ ನಾಮಪತ್ರ‌ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share this with Friends

Related Post