Fri. Dec 27th, 2024

ಯದುವೀರ್ ಗೆಲುವು: ಮೈಸೂರಿನಲ್ಲಿ ಬಿಜೆಪಿಗರ ಸಂಭ್ರಮ

Share this with Friends

ಮೈಸೂರು, ಜೂನ್.4: ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ನಗರದಲ್ಲಿ ಸಂಭ್ರಮ ಮನೆ‌ಮಾಡಿತ್ತು.

ಸಂಭ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ನೇತೃತ್ವದಲ್ಲಿ ನೂರೊಂದು ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸಾರ್ವಜನಿಕರಿಗೆ ಸಿಹಿವಿತರಣೆ ಮಾಡಿ ವಿಜಯೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾಕ್ಷದ ಕಾರ್ಯಕರ್ತರು ಯದುವೀರ್ ಹಾಗೂ ನರೇಂದ್ರ ಮೋದಿಯವರ ‌ಹೆಸರುಗಳನ್ನು ಕೂಗಿ ಜಯಕಾರ ಹಾಕಿ ಸಂಭ್ರಮಿಸಿದರು.


Share this with Friends

Related Post