Sat. Dec 28th, 2024

ಯದುವೀರ್ ಗೆಲುವು: ಅರಮನೆ ಬಳಿ ಮೈಸೂರು ಪಾಕ್ ವಿತರಿಸಿ ಸಂಭ್ರಮ

Share this with Friends

ಮೈಸೂರು, ಜೂ.4: ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಗೆಲುವಿನ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಸೇನೆ ಸದಸ್ಯರು ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಿದರು.

ಪ್ರವಾಸಿಗರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಮೈಸೂರು ಪಾಕ್ ವಿತರಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯದುವೀರ್ ಒಡೆಯರ್ ರವರಿಗೆ ಜೈಕಾರ ಕೂಗಿ ಖುಷಿ ಪಟ್ಟರು.

ನಂತರ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ‌ ಆಗಬೇಕೆಂದು ಹಾರೈಸಿದರು.ಯದುವೀರ್ ಒಡೆಯರ್ ಹಾಗೂ‌ ಮೋದಿಯವರ ಭಾವಚಿತ್ರಗಳನ್ನು ಹಿಡಿದು ಜಯ್ ಕಾರ ಹಾಕಿದರು.

ಈ ವೇಳೆ ಜೀವದಾರರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಯದುವೀರ್ ಒಡೆಯರ್ ಸೇನೆ ಅಧ್ಯಕ್ಷ ಬೈರತಿ ಲಿಂಗರಾಜು, ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ, ವಿಪ್ರ ಮುಖಂಡರಾದ ಮಹೇಶ್ ಕುಮಾರ್, ಸಚಿಂದ್ರ, ಸ್ಥಳೀಯ ವ್ಯಾಪಾರಿಗಳಾದ ಲಕ್ಷ್ಮಣ್, ಸುಬ್ಬರಾವ್, ಕುಮಾರ್ , ಚಂದ್ರಶೇಖರ್, ಗಿರಿಜಮ್ಮ, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್, ಮಹದೇವ ಪ್ರಸಾದ್‌ ಮತ್ತಿತರರು ಹಾಜರಿದ್ದರು.


Share this with Friends

Related Post