Thu. Dec 26th, 2024

ಯೋಗದಿಂದ ಅನೇಕ ರೋಗಗಳಿಗೆ ಮುಕ್ತಿ: ಲತಾ ಎಸ್

Share this with Friends

ಮೈಸೂರು,ಜೂ.21:ಯೋಗ ಕೇವಲ ಆಸನವಲ್ಲ, ಅದು ನಮ್ಮ ಬದುಕನ್ನು ಕಟ್ಟಿಕೊಡುವಂತ ಅತ್ಯುನ್ನತ ಸಾಧನ ಎಂದು
ಯೋಗ ಪಟು ಲತಾ ಎಸ್ ಹೇಳಿದರು.

ಇಂಗ್ಲೀಷ್ ಔಷಧಿ ಮತ್ತು ಆಯುರ್ವೇದ ಔಷಧಿಯಿಂದ ಗುಣಪಡಿಸಲಾ ಗದಂತಹ ಹಲವಾರು ರೋಗಗಳನ್ನು ಯೋಗದಿಂದ ಸರಿಪಡಿಸಬಹುದು ಎಂದು ಅವರು ತಿಳಿಸಿದರು

ಸರಸ್ವತಿಪುರಂನಲ್ಲಿರುವ ಜೆ ಎಸ್ ಎಸ್ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಅವರು ಮಾತನಾಡಿದರು.

ಯೋಗಿಗಗಳಾಗ ಬೇಕೆಂದರೆ ಕೇವಲ ಯಾವುದೋ ಒಂದು ದಿನಕ್ಕೆ ಯೋಗವನ್ನು ಆಚರಣೆ ಮಾಡಿದರೆ ಸಾಧ್ಯವಾಗುವುದಿಲ್ಲ. ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮ ದೇಹದ ಆರೋಗ್ಯ ಸ್ವಾಸ್ಥ್ಯ ಇದ್ದಾಗ ಮನಸ್ಸು ಸಹ ಸ್ವಾಸ್ಥ್ಯವಿರುತ್ತದೆ. ಮನಸ್ಸು ಸರಿ ಇದ್ದರೆ ಒಳ್ಳೆಯ ರೀತಿಯಲ್ಲಿ ವಿಚಾರ ಚಿಂತನೆ ಮಾಡಬಹುದು ಎಂದು ತಿಳಿಸಿದರು.

ಯೋಗ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಸರಳ ಆಸನಗಳು, ಪ್ರಾಣಾಯಾಮ ಭುಜಂಗಸನಾಗಳನ್ನು ಲತಾ ಎಸ್ ಮಾಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಗುರುಸ್ವಾಮಿ ಎಂ ಮತ್ತು ಸಿಬ್ಬಂದಿ ಹಾಜರಿದ್ದರು.


Share this with Friends

Related Post