Thu. Dec 26th, 2024

ಇಂದಿನ ವೇಗದ ಜಗತ್ತಿನಲ್ಲಿ ಯೋಗಾಭ್ಯಾಸ ಅತ್ಯಗತ್ಯ:ಶಿಲ್ಪಿ‌‌ ಅಗರ್ವಾಲ್

Share this with Friends

ಮೈಸೂರು,ಜೂ.21: ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸ್ವಂತಕ್ಕಾಗಿ ಮತ್ತು ಸಮಾಜಕ್ಕಾಗಿ ಯೋಗ ಎಂಬ ಈ ವರ್ಷದ ವಿಷಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಲಾಯಿತು.

ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯೋಗದಿಂದ ಆಗುವ ಹಲವಾರು ಪ್ರಯೋಜನಗಳನ್ನು ವಿವರಿಸಿದರು.

ರೈಲ್ವೆ ನೌಕರರು ಮತ್ತು ಅವರ ಕುಟುಂಬಗಳು ನಿಯಮಿತವಾದ ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಸಂಯೋಜಿಸಿಕೊಳ್ಳುವಂತೆ ತಿಳಿಸಿದರು. ಇಂದಿನ ವೇಗದ ಜಗತ್ತಿನಲ್ಲಿ ಯೋಗಾಭ್ಯಾಸ ಅತ್ಯಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಸಾಮಾನ್ಯ) ವಿನಾಯಕ್ ನಾಯಕ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ವಿಜಯಾ, ಸುಮಾರು 200 ಸಿಬ್ಬಂದಿ ಭಾಗವಹಿಸಿದ್ದರು.

ಒಂದು ಗಂಟೆ ಕಾಲ ನಡೆದ ಈ ಯೋಗ ಕಾರ್ಯಕ್ರಮವನ್ನು ‘ಆರ್ಟ್ ಆಫ್ ಲಿವಿಂಗ್‌’ನ ಪ್ರತಿನಿಧಿಗಳು (ಶಿಕ್ಷಕರು) ನಡೆಸಿಕೊಟ್ಟರು.


Share this with Friends

Related Post