Wed. Dec 25th, 2024

ಯೋಗ ಶಿಕ್ಷಕಿ ಆತ್ಮಹತ್ಯೆ

Share this with Friends

ಮೈಸೂರು,ಜೂ.24: ಪತಿಯಿಂದ ವಿಚ್ಛೇದನ ಪಡೆದು ಯೋಗ ಶಿಕ್ಷಕಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೈಸೂರಿನ ಗೋಕುಲಂ ಬಾಡವಣೆಯಲ್ಲಿ ಘಟನೆ ನಡೆದಿದ್ದು,ಮಲ್ಲಿಕಾ(47)ಆತ್ಮಹತ್ಯೆ ಮಾಡಿಕೊಂಡ ಯೋಗ ಶಿಕ್ಷಕಿ.

ಮಲ್ಲಿಕಾ ತಮ್ಮ ಮನೆಯ ರೂಮ್ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು,ಯಾವ‌ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ವಿವಿ ಪುರಂ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post