ಬೆಂಗಳೂರು, ಮಾ.25: ಇಂದು ಹೋಳಿ ಹುಣ್ಣಿಮೆ. ಹಾಗಾಗಿ ಎಲ್ಲೆಲ್ಲೂ ಯುವಕರು ಯುವತಿಯರು ಬಣ್ಣಗಳನ್ನು ಹಾಕಿಕೊಂಡು ಸಂಭ್ರಮಿಸಿದರು.
ಬೆಂಗಳೂರಿನಲ್ಲಿ ಕುಡಿಯಲು ನೀರಿಲ್ಲ ಆದರೂ ಯುವ ಜನರು ಒಬ್ಬರಿಗೊಬ್ಬರು ಮೈತುಂಬ ಬಣ್ಣ ಎರಚಿ ಸಂಭ್ರಮದಲ್ಲಿ ತೊಡಗಿದ್ದು ಕಂಡು ಬಂದಿತು.
ಹುಡುಗ, ಹುಡುಗಿಯರು, ದೊಡ್ಡವರು ಚಿಕ್ಕವರು ಎಂದು ಭೇದವಿಲ್ಲದೆ ಮೈತುಂಬ ಹಾಗೂ ಬಟ್ಟೆ ತುಂಬಾ ಬಣ್ಣ ಬಣ್ಣದ ಪೌಡರ್ ಅನ್ನು ಒಬ್ಬರಿಗೊಬ್ಬರು ಎರಚಿ ಋಷಿ ಪಟ್ಟರು.
ಆದರೆ ಈಗಾಗಲೇ ಬಿಬಿಎಂಪಿ ಮತ್ತು ಜಲಮಂಡಳಿ ಹೋಳಿ ಹಬ್ಬದಂದು ಮನಬಂದಂತೆ ಬಣ್ಣ ಹಾಕಿ ಗಲೀಜು ಮಾಡಬಾರದು, ನೀರನ್ನು ಪೋಲು ಮಾಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದವು.
ಆದರೆ ಇದನ್ನೆಲ್ಲ ಲೆಕ್ಕಿಸದೆ ಯುವಕ ಯುವತಿಯರು, ಮಕ್ಕಳು ರಂಗೋಲಿ ಬಣ್ಣದಲ್ಲಿ ಮಿಂದಿದ್ದಾರೆ ಇದನ್ನು ಅದು ಹೇಗೆ ಸ್ವಚ್ಛ ಮಾಡುತ್ತಾರೊ ಕಾದು ನೋಡಬೇಕು.