Tue. Dec 24th, 2024

ಅಪಘಾತದಲ್ಲಿ ಯುವತಿ ಸಾವು:ತಂದೆಯ ಬರುವಿಕೆಗೆ ಕಾದಿದೆ ಕುಟುಂಬ

Share this with Friends

ಮೈಸೂರು,ಆ.5: ಸ್ನೇಹಿತರ ಜೊತೆ ಸ್ಕೂಟರ್ ನಲ್ಲಿ ಹೋಗುವಾಗ ಡಿವೈಡರ್ ಗೆ ಡಿಕ್ಕಿ ಹೊಡೆದು ಯುವತಿ ಮೃತಪಟ್ಟಿದ್ದು,ಶವ ಸಂಸ್ಕಾರ‌ ಮಾಡದೆ ಮನೆಬಿಟ್ಟು ಹೋಗಿರುವ ಆಕೆಯ‌ ತಂದೆಗಾಗಿ ಕುಟುಂಬ ಕಾಯುತ್ತಿರುವ ಮನಕರಗುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರಿನ ಕನಕಗಿರಿ ನಿವಾಸಿ ನಾಗರಾಜ್- ಇಂದಿರಮ್ಮ ದಂಪತಿಯ ಪುತ್ರಿ
ಕವನ ಮೃತಪಟ್ಟ ದುರ್ದೈವಿ, ಮೃತ ಯುವತಿಯ ಮೃತದೇಹವನ್ನ ಇಟ್ಟುಕೊಂಡ ಕುಟುಂಬ ಹೆತ್ತ ತಂದೆಯ ಬರುವಿಕೆಗಾಗಿ ಕಾದಿದ್ದು ಅಂತ್ಯಕ್ರಿಯೆಯನ್ನ ಒಂದು ದಿನ ಮುಂದೂಡಿದೆ.

ಹೂಟಗಳ್ಳಿಯಲ್ಲಿ ಸ್ನೇಹಿತರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಡಿವೈಡರ್ ಗೆ ಢಿಕ್ಕಿ ಹೊಡೆದ ಕಾರಣ ಕವನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆದಿಚುಂಚನಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದರು.ಮೂರು ತಿಂಗಳ ಹಿಂದೆ ಈಕೆಯ ತಂದೆ ನಾಗರಾಜ್ ಮನೆ ಬಿಟ್ಟು ಹೋಗಿದ್ದಾರೆ.

ಅಪಘಾತದಲ್ಲಿ ಮಗಳು ಮೃತಪಟ್ಟಿದ್ದಾಳೆ.ನಿಮಗಾಗಿ ಮೃತದೇಹವನ್ನ ಇರಿಸಿಕೊಂಡಿದ್ದೇವೆ.ಯಾವುದೇ ಬೇಸರವಿದ್ದರೂ ಮರೆತು ಮನೆಗೆ ಬನ್ನಿ ಎಂದು ಮಾಧ್ಯಮಗಳ ಮೂಲಕ ಕುಟುಂಬದವರು ಮನವಿ ಮಾಡಿದ್ದಾರೆ

ಅಂತ್ಯಕ್ರಿಯೆಗೆ ಮುನ್ನ ಕವನಳ ತಂದೆ ಮನೆಗೆ‌ ಹಿಂದಿರುಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.


Share this with Friends

Related Post