Tue. Dec 24th, 2024

ಮೋದಿ ಮತ್ತೆ ಪ್ರದಾನಿಯಾಗಲೆಂದು ಹಾರೈಸಿ ಯುವಕ ಸೈಕಲ್ ಯಾತ್ರೆ

Share this with Friends

ಮೈಸೂರು, ಏ.24: ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂದು ಹಾರೈಸಿ ಯುವಕನಂದ ಸೈಕಲ್ ಯಾತ್ರೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಮೋದಿ ಯವರು ಮತ್ತೆ ಪ್ರದಾನಿಯಾಗ ಬೇಕೆಂಬ‌ ಹಾರೈಕೆಯೊಂದಿಗೆ ಧಾರವಾಡ ಮೂಲದ ಯುವಕ ಭರತ್ ತವನೂರ ಸಾವಿರಾರು ಕೀ.ಮೀ.ಸೈಕಲ್ ಯಾತ್ರೆ ಮಾಡುತ್ತಿದ್ದಾರೆ.

ಮೈಸೂರಿನ ಭಾ.ಜ.ಪ.ಕಚೇರಿಗೆ ಆಗಮಿಸಿದ ಭರತ್ ಅವರನ್ನು ಶಾಸಕ ಟಿ.ಎಸ್.ಶ್ರೀ ವತ್ಸ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು,ಮೈಸೂರು ನಗರ ಉಪಾಧ್ಯಕ್ಷ ಜೋಗಿ ಮಂಜು, ಕೆ.ಅರ್.ಕ್ಷೇತ್ರ ಯುವಮೊರ್ಚಾ ಅಧ್ಯಕ್ಷ ನಿಶಾಂತ್,ಕಿಶೋರ್,ಮಣಿರತ್ನಂ ಅವರುಗಳು ಸ್ವಾಗತಿಸಿದರು.

ಭರತ್ ಅವರು 34 ವರ್ಷದವರಾಗಿದ್ದು ಧಾರವಾಡ ಜಿಲ್ಲೆಯ ಎಸ್ ಎಸ್ ಕೆ ಕಾಲೇಜಿ ನಲ್ಲಿ ಪಿ.ಯು.ಸಿ ಮಾಡಿದ್ದಾರೆ, ಮೂಲತಃ ಹುಬ್ಬಳ್ಳಿ ಧಾರವಾಡ ಜಿಲ್ಲೆಯವರು, ಬೆಳಾಗಂ ನಿಂದ ಪ್ರಾರಂಬಿಸಿ ಬೆಳಗಾಂ,ಬಾಗಲಕೋಟೆ, ಬಿಜಾಪುರ, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ದಾವಣಗೆರೆ,ಚಿತ್ರದುರ್ಗ, ತುಮಕೂರು, ಬೆಂಗಳೂರು, ಉತ್ತರ, ದಕ್ಷಿಣ, ಚಿಕ್ಕಬಳ್ಳಾಪುರ ನಂತರ ಮೈಸೂರಿಗೆ ಬಂದಿದ್ದಾರೆ.

ಮತ್ತೊಮ್ಮೆ ದೇಶದ ಪ್ರಧಾನಮಂತ್ರಿ ಯಾಗಿ ನರೇಂದ್ರ ಮೋದಿಯವರು ಅಯ್ಕೆಯಾಗಲೆಂದು ಹಾರೈಸಿ ಭರತ್ ಅವರು
ಈ ಸೈಕಲ್ ಯಾತ್ರೆ ಮಾಡುತ್ತಿರುವುದು ನಿಜಕ್ಕೂ ವಿಶೇಷ.

ಅವರು ಫೆಬ್ರವರಿ.18 ರಂದು ಸೈಕಲ್ ಯಾತ್ರೆ ಪ್ರಾರಂಭ ಮಾಡಿದ್ದು, ಸುಮಾರು 2200 ಕಿಮೀ ಕ್ರಮಿಸಲಿದ್ದಾರೆ.


Share this with Friends

Related Post