ಮೈಸೂರು ,ಮೇ.21:ಕಲುಷಿತ ನೀರು ಸೇವಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಡಿ ಸಾಲುಹುಂಡಿ ವಾಸಿ ಕನಕರಾಜ್ (20) ಮೃತಪಟ್ಟ ಯುವಕ.
ಒಂದೆರಡು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಡಿ ಸಾಲುಹುಂಡಿಯ ಹಲವರು ಆಸ್ಪತ್ರೆಗೆ ದಾಖಲಾಗಿದ್ದರು,ಅವರಲ್ಲಿ ಕನಕರಾಜ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನಪ್ಪಿದ್ದಾನೆ.
ಆಸ್ಪತ್ರೆಗೆ ಆಗಮಿಸಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ, ಮೃತ ಕನಕರಾಜ್ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಘಟನೆ ಕುರಿತು ವೈದ್ಯರ ಬಳಿ ಜಿ.ಟಿ ದೇವೇಗೌಡ ಮಾಹಿತಿ ಪಡೆದರು. ಈ ವೇಳೆ ಮಾತನಾಡಿದ ಶಾಸಕರು ಈ ಭಾಗದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ ಅರ್ಧಕ್ಕೆ ಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪೂರ್ಣವಾದ ಕಾಮಗಾರಿ ಸಮೀಪದಲ್ಲೇ ಬೋರ್ವೆಲ್ ಕೊರೆಯಲಾಗಿದ್ದು ಒಳಚರಂಡಿ ನೀರು ಬೋರ್ವೆಲ್ ನೀರು ಮಿಶ್ರವಾಗಿ ಇಂತಹ ಅವಘಡಗಳಿಗೆ ಕಾರಣವಾಗಿದೆ, ಕೂಡಲೇ ಕಾಮಗಾರಿಯನ್ನು ಸಂಬಂಧ ಪಟ್ಟ ಗುತ್ತಿಗೆದಾರರು,ಟೆಂಡರ್ ಪಡೆದವರು ಪೂರ್ಣಗೊಳಿಸಬೇಕೆಂದು ಜಿಟಿಡಿ ತಾಕೀತು ಮಾಡಿದರು.