Sat. Nov 16th, 2024

ಜಮೀರ್ ಹೇಳಿಕೆಗೆ ಡಿಕೆಶಿ ವಿರೋಧ

Share this with Friends

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿಗೆ ಕರಿಯ ಎಂದಿದ್ದ ಸಚಿವ ಜಮೀರ್ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ,
ಜಮೀರ್ ಹೇಳಿದ್ದು ಸರಿಯಲ್ಲ,ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅದನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಜಮೀರ್ ಅವರು ಏನುಬೇಕಾದ್ರೂ ಕರೆದುಕೊಳ್ಳಲಿ. ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತನಾದ್ರೂ ಕರೆಯಲಿ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ. ನಾನು ಆನ್ ರೆಕಾರ್ಡ್ ಹೇಳ್ತೇನೆ ಜಮೀರ್ ಹೇಳಿದ್ದು ಸರಿಯಲ್ಲ ಎಂದು ಹೇಳಿದರು.

ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಡಿಕೆಶಿಗೆ ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ಳುವಿರಾ ಎಂಬ ಪ್ರಶ್ನೆಗೆ, ಅದನ್ನ ಇಲ್ಲಿ ಬಹಿರಂಗವಾಗಿ ಅದನ್ನೆಲ್ಲ ಮಾತಾಡಕ್ಕಾಗೋದಿಲ್ಲ ಎಂದು ತಿಳಿಸಿದರು.

ಜಮೀರ್ ವಿರುದ್ಧ ಶಿಸ್ತು ಕ್ರಮ ಇದೆಯೆ ಎಂದುದಕ್ಕೆ ಜಮೀರ್ ಅವರದ್ದು ಪರ್ಸನಲ್ ವಿಚಾರ. ಅವರು ಮಾತನಾಡಬಾರದಿತ್ತು. ಕಪ್ಪು ಬಿಳುಪು ಅದೆಲ್ಲಾ ಬೇಡ. ಪಕ್ಷದ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಪ್ರೀತಿಯಿಂದ ಮಾತಾಡಿದ್ದರೂ ಸಲುಗೆಯಿಂದ ಮಾತನಾಡಿದ್ದರೂ ತಪ್ಪು ತಪ್ಪೇ. ಜಮೀರ್ ಅವರಿಗೆ ಆಂತರಿಕವಾಗಿ ಹೇಳಿದ್ದೇವೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ನಾವು ಆ ಹಂತಕ್ಕೆ ಹೋಗಬಾರದು ಅಷ್ಟೇ. ಅವರಿಬ್ಬರು ಏನು ಅಂತ ಗೊತ್ತಿಲ್ಲ. ಅದು ಜನ ತೀರ್ಮಾನ ಮಾಡಲಿ. ನಾವು ಅವರನ್ನ ತಿದ್ದುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಸಿದ್ಧತೆ ಬಗ್ಗೆ ಪ್ರತಿಕ್ರಿಯಿಸಿ, ಅದು ಬಿಜೆಪಿಯವರ ಮೂರ್ಖತನ. ಅವರ ಕಾಲದಲ್ಲೇ ಪಹಣಿಗಳು ಬರ್ತಿವೆ. ಅದನ್ನ ನಮ್ಮವರು ನೋಡಿಲ್ಲ. ಈಗ ಅದರ ಬಗ್ಗೆ ಮಾತನಾಡ್ತಿದ್ದಾರೆ. ನಾವು ಮಾತಾಡಿದ್ರೆ ನೀವು ಕವರ್ ಮಾಡಲ್ಲ, ಅವರು ಮಾತನಾಡಿದ್ರೆ ಕವರ್ ಮಾಡ್ತೀರ ಎಂದು ಗರಂ ಆದರು.

ಹಿಂದೆ ಅವರು ಖರೀದಿ ಮಾಡಿದ್ದು ಏನು, ಕುರಿಗಳನ್ನೇ ತಾನೇ ಅವರು ಖರೀದಿ ಮಾಡಿದ್ದು.ಅಶ್ವಥನಾರಾಯಣ್, ಶ್ರೀನಿವಾಸಗೌಡ ಮನೆಗೆ ಹಣ ತೆಗೆದುಕೊಂಡು ಹೋಗಿರಲಿಲ್ವ, ಸದನದಲ್ಲೇ ಇದರ ಬಗ್ಗೆ ಚರ್ಚೆ ಆಗಲಿಲ್ವೇ, ಮೊದಲು ಸಾವಿರ ಕೋಟಿ ಕಲೆಕ್ಟ್ ಮಾಡಿದ್ಯಾರು, ಮೊದಲು ಅಲ್ಲಿಂದ ಶುರುಮಾಡಿ, ಸಿಎಂ ಹೇಳಿದ ನಂತರ ಇದೆಲ್ಲ ಶುರುವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.


Share this with Friends

Related Post