ಮೈಸೂರು: ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ಬಂಧಿಸಿರುವ ಲಷ್ಕರ್ ಠಾಣೆ ಪೊಲೀಸರು ನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸರಗೂರಿನ ನಿವಾಸಿ ನಿಂಗರಾಜು ಬಂಧಿತ ಆರೋಪಿ.ಬಂಧಿತನಿಂದ 1.30 ಲಕ್ಷ ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈತನ ಬಂಧನದಿಂದ ಲಷ್ಕರ್ ಹಾಗೂ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಾಲ್ಕು ದ್ವಿಚಕ್ರ ವಾಹನಗಳ ಕಳವು ಪ್ರಕರಣ ಪತ್ತೆಯಾಗಿದೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಅವರ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ನಿರೀಕ್ಷಕರಾದ ಪ್ರಸಾದ್ ಹಾಗೂ ಪಿಎಸ್ಸೈ ಗಳಾದ ಕು.ರಾಧಾ ಮತ್ತು ಅನಿಲ್ ಕುಮಾರ್ ವನ್ನೂರ್ ಅವರುಗಳ ನೇತೃತ್ವದಲ್ಲಿ ಸಿಬ್ಬಂದಿ ಸುರೇಶ್,ರವಿಕುಮಾರ್,ಮಂಜುನಾಥ್,
ಚೌಡಪ್ಪ ಪಾಸೀಗಾರ್,ಅಬ್ದುಲ್ ರೆಹಮಾನ್,ಅಶ್ವಿನಿ ಹಳವಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.