Mon. Dec 23rd, 2024

ನನ್ನನ್ನ ಅವಮಾನಿಸಬೇಡಿ-ಜಿಟಿಡಿಗೆಸಾ.ರಾ.ಮಹೇಶ್ ತಿರುಗೇಟು

Share this with Friends

ಮೈಸೂರು: ನಾನು ಏನಾದರೂ ತಪ್ಪು ಮಾಡಿದ್ದರೆ ಪಕ್ಷದ ವೇದಿಕೆಗೆ ಕರೆದು ಕಪಾಳಕ್ಕೆ ಹೊಡೆಯಿರಿ,ಆದರೆ ಸಾರ್ವಜನಿಕವಾಗಿ ಅವಮಾನ ಮಾಡಬೇಡಿ ಎಂದು ಸಾ. ರಾ. ಮಹೇಶ್ ಶಾಸಕ‌ ಜಿ.ಟಿ.ದೇವೇಗೌಡರಿಗೆ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ರಾಜಕೀಯ ಬಿಟ್ಟು ಬಿಡಿ ಎಂದು ಜಿಟಿಡಿ ಹೇಳಿದರೆ ನಾಳೆಯೆ ಸಾರ್ವಜನಿಕ ಜೀವನದಿಂದ ದೂರ ಇರುತ್ತೇನೆ ಎಂದು ತಿಳಿಸಿದರು.

ನನಗೆ ಪಕ್ಷ ಎಲ್ಲಾ ಕೊಟ್ಟಿದೆ. ನನಗೆ ಇನ್ಯಾವ ಆಸೆಯೂ ಇಲ್ಲ, ನಾನು ಸುಳ್ಳು ಹೇಳುತ್ತಿಲ್ಲ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆಯಲು ಎಚ್.ಡಿ. ದೇವೇಗೌಡರೆ ಜಿಟಿಡಿ ಪಿಎ ಗೆ ಕರೆ ಮಾಡಿದ್ದರು. ಇದನ್ನು ಎಚ್.ಡಿ. ದೇವೇಗೌಡರೆ ಹೇಳುತ್ತಾರೆ ಕೇಳಿ;
ಕಾಲ್ ಡಿಟೈಲ್ಸ್ ಬೇಕಾದರೆ ಕೊಡುತ್ತೇವೆ ಎಂದು ಸಾ.ರಾ ಮಹೇಶ್ ಸ್ಪಷ್ಟಪಡಿಸಿದರು.

ನನ್ನ ಮೇಲೆ ಜಿಟಿಡಿ ಗೂಬೆ ಕೂರಿಸುವುದನ್ನು ನಿಲ್ಲಿಸಲಿ. ಮುಂದೆ ಇದೇ ರೀತಿ ಅವರು ಮಾತು ಮುಂದುವರಿಸಿದರೆ ನನ್ನ ಮಾತಿನ ವರಸೆ ಬದಲಾಗುತ್ತದೆ ಎಂದು ಸಾರಾ ಮಹೇಶ್ ಎಚ್ಚರಿಸಿದರು.

ನನ್ನ ಸೋಲಿನ ಬಗ್ಗೆ ಜಿಟಿಡಿ ಮಾತಾಡುತ್ತಾರೆ. ಹಾಗಾದರೆ ಜಿ.ಟಿ. ದೇವೇಗೌಡರು ಚುನಾವಣೆಯಲ್ಲಿ ಸೋತಿಲ್ವಾ, 2008 ರಲ್ಲಿ ಜಿಟಿಡಿ ಯಾಕೆ ಬಿಜೆಪಿ ಹೋಗಿದ್ದರು ಎಂದು ಪ್ರಶ್ನಿಸಿದರು.

ನಾನು ಶಾಸಕ ಅಲ್ಲ. ನನ್ನ ಕೇಳಿ ಕುಮಾರಸ್ವಾಮಿ ಯಾರನ್ನಾದರೂ ಸಭಾ ನಾಯಕ ಮಾಡುತ್ತಾರಾ ನಾನು ಹೇಗೆ ನಿಮಗೆ ಆ ಸ್ಥಾನ ತಪ್ಪಿಸಲಿ ಎಂದು ಸಾರಾ. ಮಹೇಶ್ ಪ್ರಶ್ನಿಸಿದರು.

ನಾನು ಜೆಡಿಎಸ್ ನಲ್ಲಿ ಇರುವುದು ಜಿ.ಟಿ. ದೇವೇಗೌಡರಿಗೆ ಇಷ್ಟ ಇಲ್ಲ ಅಂದರೆ ನಾನೇ ಪಕ್ಷದಿಂದ ದೂರ ಇರುತ್ತೇನೆ. ಸಾಯುವ ತನಕ ಪಕ್ಷಕ್ಕೆ ಮತ ಹಾಕುತ್ತೇನೆ ಎಂದು ಹೇಳಿದರು.

ಬಹಳಷ್ಟು ನಾಯಕರು ಜೆಡಿಎಸ್ ಬಗ್ಗೆ ಮಾತಾಡುತ್ತಿದ್ದಾರೆ ಚುನಾವಣೆ ತಯಾರಿ ಸರಿ ಇಲ್ಲದ ಕಾರಣ ಚನ್ನಪಟ್ಟಣದಲ್ಲಿ ಸೋಲಾಗಿದೆ. ಅಲ್ಲದೆ ಅನಿವಾರ್ಯ ಪರಿಸ್ಥಿತಿಯಲ್ಲಿ ನಿಖಿಲ್ ಅಭ್ಯರ್ಥಿಯಾದರು ಎಂದು ತಿಳಿಸಿದರು.

ಪ್ರಾದೇಶಿಕ ಪಕ್ಷ ಮುಳುಗಿತು ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಹಿಂದೆಯೂ ಪಕ್ಷ ನಿರ್ನಾಮ ಮಾಡುತ್ತೇವೆ ಎಂದು ಕೆಲವರು ಹೇಳಿದ್ದರು
ಯಾರೂ ಜೆಡಿಎಸ್ ಪಕ್ಷವನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಸಾರಾ ಕಡಕ್ಕಾಗಿ ಹೇಳಿದರು.


Share this with Friends

Related Post