Sun. Jan 12th, 2025

ಮೇಕೆದಾಟುವಿಗೆ ಕಾವೇರಿ ಕ್ರಿಯಾ ಸಮಿತಿಭೇಟಿ:ಪರಿಶೀಲನೆ

Share this with Friends

ಮೈಸೂರು: ಕಾವೇರಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮೇಕೆದಾಟುವಿಗೆ ಭೇಟಿ ನೀಡಿ ಅಣೆಕಟ್ಟೆ ನಿರ್ಮಾಣದ ಸ್ಥಳ ಪರಿಶೀಲಿಸಿದರು.

ಈ ವೇಳೆ ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ಅವರು ಮಾತನಾಡಿ ಮೇಕೆದಾಟು ಅಣೆಕಟ್ಟು ಕಟ್ಟುವ ವಿಚಾರವಾಗಿ ಸಾಧಕ ಬಾದಕಗಳ ಬಗ್ಗೆ ಮತ್ತು ಅನೇಕ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲು ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದು ತಿಳಿಸಿದರು.

ಮೇಕೆದಾಟು ಹೋರಾಟ ಸಮಿತಿಯ ಅಧ್ಯಕ್ಷರಾದ ಸಂಪತ್ ಕುಮಾರ್ ಅವರು ಇಲ್ಲಿ ನಮ್ಮ ಜೊತೆ ಆಗಮಿಸಿದ್ದು ಅವರ ಜೊತೆಗೂಡಿ ಚರ್ಚಿಸಿ ಮುಂದಿನ ರೂಪು ರೇಷೆಗಳ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.

ಸರ್ಕಾರ ‌‌‌ಕೂಡಲೇ‌ ಅಣೆಕಟ್ಟು ಕಟ್ಟಬೇಕು,ಅಣೆಕಟ್ಟೆ ನಿರ್ಮಾಣ‌ದ ಸಂದರ್ಭದಲ್ಲಿ ನಾವು ಏನು ಮಾಹಿತಿ ಕೊಡಬೇಕು ಅದನ್ನ‌ ಕೊಡುತ್ತೇವೆ,ಆ ಬಗ್ಗೆ ಕೂಡಾ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಅಣೆಕಟ್ಟೆ ನಿರ್ಮಾಣದ ವಿಷಯದಲ್ಲಿ ನಮ್ಮಿಂದಾದ ಎಲ್ಲ ಸಹಾಯ ಮಾಡಲು ಸಿದ್ದರಿದ್ದೇವೆ,ತಮಿಳುನಾಡಿಗೆ ಕಾವೇರಿ ಹರಿದು ಹೋಗುವ ಸ್ಥಳ ಮತ್ತು ಬಿಳಿಗುಂಡ್ಲುವಿಗೂ‌ ಭೇಟಿ ನೀಡಿ ಪರಿಶೀಲಿಸುತ್ತೇವೆ ಎಂದು ಜಯಪ್ರಕಾಶ್ ಹೇಳಿದರು.

ಕಾವೇರಿ ಕ್ರಿಯಾ ಸಮಿತಿಯ ಕಾರ್ಯದರ್ಶಿ ತೇಜೇಶ್ ಲೋಕೇಶ್ ಗೌಡ, ವರಕೂಡು ಕೃಷ್ಣೇಗೌಡ, ಸಿ ಹೆಚ್ ಕೃಷ್ಣಪ್ಪ ಹಾಗೂ ನಾಗರಾಜ್‌ ಕೂಡಾ ಮೇಕೆದಾಟುವಿಗೆ ಎಸ್ ಜಯಪ್ರಕಾಶ್ ಇದ್ದರು.


Share this with Friends

Related Post