Fri. Mar 6th, 2026

ಬೆಂಗಳೂರು – ಬೀದರ್ ನಡುವೆ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ ವಿಶೇಷ ರೈಲು ಸಂಚಾರ ಮುಂದುವರಿಕೆ

Share this with Friends

ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚಿನ ದಟ್ಟಣೆಯನ್ನು ನಿಯಂತ್ರಿಸಲು ನೈಋತ್ಯ ರೈಲ್ವೆಯು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಬೀದರ್ ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ಮುಂದುವರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಸಂಖ್ಯೆ 06539 (ಎಸ್ಎಂವಿಟಿ ಬೆಂಗಳೂರು – ಬೀದರ್): ಈ ರೈಲು 2026ರ ಜನವರಿ 2 ರಿಂದ ಫೆಬ್ರವರಿ 27 ರವರೆಗೆ ಪ್ರತಿ ಶುಕ್ರವಾರ ಮತ್ತು ಭಾನುವಾರಗಳಂದು ಸಂಚರಿಸಲಿದೆ. ರೈಲು ಸಂಖ್ಯೆ 06540 (ಬೀದರ್ – ಎಸ್ಎಂವಿಟಿ ಬೆಂಗಳೂರು): ಈ ರೈಲು 2026ರ ಜನವರಿ 3 ರಿಂದ ಫೆಬ್ರವರಿ 28 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರಗಳಂದು ಸಂಚರಿಸಲಿದೆ. ಈ ರೈಲುಗಳು ಒಟ್ಟು 17 ಟ್ರಿಪ್ ಸಂಚರಿಸಲಿದ್ದು, ಪ್ರಸ್ತುತ ಇರುವ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲೇ ಯಾವುದೇ ಬದಲಾವಣೆ ಇಲ್ಲದೆ ಕಾರ್ಯನಿರ್ವಹಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಆದಾಗ್ಯೂ, ಎಸ್ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಜನವರಿ 4 ರಂದು ಕಾಮಗಾರಿ (Non-interlocking work) ನಡೆಯಲಿರುವ ಹಿನ್ನೆಲೆಯಲ್ಲಿ, ಜನವರಿ 3 ರಂದು ಬೀದರ್ನಿಂದ ಹೊರಡುವ ರೈಲು (ಸಂಖ್ಯೆ 06540) ಎಸ್ಎಂವಿಟಿ ಬೆಂಗಳೂರು ತಲುಪುವ ಬದಲು ಯಲಹಂಕ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ. ಯಲಹಂಕ ಮತ್ತು ಎಸ್ಎಂವಿಟಿ  ಬೆಂಗಳೂರು ನಡುವೆ ಈ ರೈಲು ಸಂಚಾರ ರದ್ದಾಗಿರುತ್ತದೆ. ಜನವರಿ 4 ರಂದು ಎಸ್ಎಂವಿಟಿ  ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು (ಸಂಖ್ಯೆ 06539) ಅಂದು ಯಲಹಂಕ ನಿಲ್ದಾಣದಿಂದಲೇ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಎಸ್ಎಂವಿಟಿ  ಬೆಂಗಳೂರು ಮತ್ತು ಯಲಹಂಕ ನಡುವೆ ಈ ರೈಲು ಸಂಚಾರ ರದ್ದಾಗಿರುತ್ತದೆ ಎಂದು ಮಾಹಿತಿ ನೀಡಿದೆ.


Share this with Friends

Related Post