Fri. Mar 6th, 2026

ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ & ಅನಧಿಕೃತ ಕಟ್ಟಡಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಟಾಸ್ಕ್ ಫೋರ್ಸ್

Share this with Friends

ಬೆಂಗಳೂರು:ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣ ನಿಯಂತ್ರಣಕ್ಕೆ ಪ್ರತ್ಯೇಕ ಟಾಸ್ಕ್ ಫೋರ್ಸ್ ರಚಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ.

ಜಿಬಿಎ ಮುಖ್ಯ ಆಯುಕ್ತರು ಇಂದು ಸಭೆ ನಡೆಸಿ ನಗರ ಪಾಲಿಕೆಗಳಲ್ಲಿನ ಕಾಮಗಾರಿಗಳ ಅವಲೋಕನ ನಡೆಸಿದರು. ಈ ವೇಳೆ ಪೌರಕಾರ್ಮಿಕರಿಗೆ ಮುಖಚಹರೆ ಹಾಜರಾತಿಗೆ ಸೂಚಿಸಿ ಫೇಸ್ ರಿಕಗ್ನಿಷನ್ ಆಧಾರಿತ ಹಾಜರಾತಿ ವ್ಯವಸ್ಥೆ ಎಲ್ಲಾ ನಗರ ಪಾಲಿಕೆಗಳಲ್ಲಿ ಮುಂದಿನ 2 ವಾರಗಳಲ್ಲಿ ಸಂಪೂರ್ಣ ಅನುಷ್ಠಾನಗೊಳಿಸಲು ಸೂಚಿಸಿದರು.

ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಬೇಕಿದ್ದು,ನಗರದಲ್ಲಿನ ರೈಲ್ವೆ ಕಾಮಗಾರಿಗಳ ಸಮಗ್ರ ಪಟ್ಟಿ ಸಿದ್ಧಪಡಿಸಿ, ಜಿಬಿಎ–ರೈಲ್ವೆ ಸಂಯುಕ್ತ ಸಭೆ ಮೂಲಕ ಪ್ರಗತಿಗೆ ಕ್ರಮ ವಹಿಸಲು ಸೂಚಿಸಿದರು.

ಕೆ-100 ರಾಜಕಾಲುವೆ ರಕ್ಷಣೆಗೆ ಆಧ್ಯತೆ ನೀಡಬೇಕು, ಕೊಳಚೆ, ಬಣ್ಣದ ಹಾಗೂ ರಕ್ತ ಮಿಶ್ರಿತ ನೀರು ಹರಿಯದಂತೆ ಕಟ್ಟುನಿಟ್ಟಿನ ಕ್ರಮ. ಉಲ್ಲಂಘನೆಗೆ ದುಪ್ಪಟ್ಟು ದಂಡ ವಿಧಿಸಬೇಕು, ಇದರ ಜತೆ ಅಗ್ನಿಶಾಮಕ ಸಿದ್ಧತೆ ಮಾಡಿಕೊಳ್ಳಬೇಕು,ನಗರಾದ್ಯಂತ ಹೈಡ್ರಂಟ್ ವ್ಯವಸ್ಥೆ, 5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಗಳು ಹಾಗೂ ಜಿಬಿಎ ಫೈರ್ ಕಂಟ್ರೋಲ್ ರೂಂ ಸ್ಥಾಪನೆಗೆ ಸೂಚನೆ ನೀಡಿದರು.

ಪ್ರಮುಖ ರಸ್ತೆ ಯೋಜನೆಗಳ ಕುರಿತು ಮಾತನಾಡಿದ ಮುಖ್ಯ ಆಯುಕ್ತರು,ಪಣತ್ತೂರು ಸಿಬಿಡಿ ರಸ್ತೆ ಕಾಮಗಾರಿ ಮುಂದುವರಿಕೆ,ನಾಗವಾರ, ಹೊಸೂರು ರಸ್ತೆ (ಆನೆಪಾಳ್ಯ), ಬನಶಂಕರಿ ಮುಖ್ಯ ರಸ್ತೆ ಅಗಲೀಕರಣ,ಟ್ಯಾನರಿ ರಸ್ತೆ ಅಗಲೀಕರಣ ತ್ವರಿತ ಆರಂಭಕ್ಕೆ ಸೂಚಿಸಿದರು.

ಪಾದಚಾರಿ ಸುರಕ್ಷತೆಗೆ ಗಮನ ಹರಿಸಬೇಕು,101 ಸ್ಥಳಗಳಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ಪರಿಶೀಲನೆ & ತ್ವರಿತ ಕಾಮಗಾರಿ ಆರಂಭಿಸಬೇಕು,ಸಂಚಾರ ಸುಧಾರಣೆ ಕ್ರಮಗಳು ಜಾರಿಯಾಗಬೇಕು,103 ಬಸ್ ತಂಗುದಾಣ ಸ್ಥಳಾಂತರ,35 ರಸ್ತೆ ಅಭಿವೃದ್ಧಿ,137 ವಾಟರ್ ಲಾಗಿಂಗ್ ಸಮಸ್ಯೆ ಪರಿಹಾರ,84 ಹಂಪ್ ತೆರವು,63 ಬಸ್ ಬೇ ವ್ಯವಸ್ಥೆಗೆ ಸೂಚಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಗೆ ಕ್ರಮ ಕೈಗೊಳ್ಳಬೇಕು,44 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕ್ರಮ. ಸಿಲ್ಕ್ ಬೋರ್ಡ್, ಹೆಬ್ಬಾಳ, ಕೋಗಿಲು ಕ್ರಾಸ್ ಭಾಗಗಳಿಗೆ ವಿಶೇಷ ಗಮನ. ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.

ಅನಧಿಕೃತ ಕಟ್ಟಡ ತೆರವು,ಪಾದಚಾರಿ ಮಾರ್ಗಗಳ ಸ್ವಚ್ಛತೆ,ಅನಾಥ ವಾಹನ ತೆರವು,ರಸ್ತೆ ಗುಂಡಿ ಮುಚ್ಚುವಿಕೆ ನಿರಂತರ,‘ಸುರಕ್ಷ–75’ ಜಂಕ್ಷನ್ ಅಭಿವೃದ್ಧಿ,ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಪ್ರಾರಂಭ,ಒಂದೇ ಮಾದರಿಯ ಸೈನ್‌ಬೋರ್ಡ್ ವಿನ್ಯಾಸಕ್ಕೆ ನಿರ್ದೇಶನ ನೀಡಿದರು.ನಗರ ಅಭಿವೃದ್ಧಿಗೆ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ವೇಗದ ಕಾರ್ಯಾಚರಣೆ ನಡೆಸಲು ಸೂಚಿಸಿದರು.

ಈ ಸಂದರ್ಭದಲ್ಲಿ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಬೆಂ.ಘ.ನಿ.ನಿದ ಸಿಇಒ ಕರೀಗೌಡ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶಿವಶಂಕರ್, ಅಪರ ಆಯುಕ್ತ ದಲ್ಜಿತ್ ಕುಮಾರ್, ಪ್ರಧಾನ ಅಭಿಯಂತರರಾದ ಡಾ. ಬಿ.ಎಸ್. ಪ್ರಹ್ಲಾದ್, ಉಪ ಆಯುಕ್ತರಾದ ಗಾಯತ್ರಿ ನಾಯಕ್, ಮುಖ್ಯ ನಗರ ಯೋಜಕರಾದ ಸುನಿಲ್ ಸೇರಿದಂತೆ ಜಲಮಂಡಳಿ, ಅಗ್ನಿಶಾಮಕ ದಳ, ಬೆಸ್ಕಾಂ, ಮೆಟ್ರೋ, ಬಿಡಿಎ, ಸಂಚಾರಿ ಪೊಲೀಸ್ ವಿಭಾಗ, ಗೇಲ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು


Share this with Friends

Related Post