Sat. Jun 6th, 2026

ಸರ್ಕಾರದ ಹಣದಲ್ಲಿ ಜನ ಸೇರಿಸಿ ಸಮಾವೇಶ ಮಾಡುತ್ತಾರೆ:ಬೊಮ್ಮಾಯಿ ಟೀಕೆ

Share this with Friends

ಹಾವೇರಿ: ಅಧಿಕಾರ ಇದೆ ಎಂದು ಸರ್ಕಾರದ ದುಡ್ಡಿನಲ್ಲಿ ಜನ ಸೇರಿಸಿ ರಾಜಕಾರಣ ಮಾತನಾಡುತ್ತಾರೆ.ಒಮ್ಮೆ ಸಿಎಂರಿಂದ ಶಕ್ತಿ ಪ್ರದರ್ಶನ, ಒಮ್ಮೆ ಡಿಸಿಎಂರಿಂದ ಶಕ್ತಿ ಪ್ರದರ್ಶನ  ಆಗುತ್ತದೆ ಇದರಿಂದ ಜನರಿಗೆ ಏನೂ ಪ್ರಯೋಜನ ಇಲ್ಲ ಎಂದು ಸರ್ಕಾರದಿಂದ ಹಾವೇರಿಯಲ್ಲಿ ಆಯೋಜಿಸಿರುವ ಸಮಾವೇಶವನ್ನು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೆಬ್ರವರಿ 13 ರಂದು ಹಾವೇರಿಯಲ್ಲಿ ಸರ್ಕಾರದ ವತಿಯಿಂದ ಸಮಾವೇಶ ಮಾಡುತ್ತಿದ್ದಾರೆ, ಯಾವ ಸಾಧನೆ ಮಾಡಿದ್ದಾರೆ ಅಂತ ಸಮಾವೇಶ ಮಾಡುತ್ತಾರೆ,ಶೂನ್ಯ ಸಾಧನೆಯ ಸಮಾವೇಶ ಮಾಡುವುದರಿಂದ ಅರ್ಥ ಇಲ್ಲ ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರದ ಬಗ್ಗೆ ಜನರಿಗೆ ಭ್ರಮ ನಿರಸ ಆಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಮನೆಗಳನ್ನು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,  ಮನೆಗಳನ್ನು ನೀಡುವುದು ಯಡಿಯೂರಪ್ಪ ಕಾಲದಲ್ಲಿ ಆಗಿದೆ. ಈಡಿ ರಾಜ್ಯದ ಮನೆಗಳನ್ನು ಅಲ್ಲಿ ಕೊಡುವುದರಲ್ಲಿ ಅರ್ಥ ಏನಿದೆ ಇನ್ನೊಬ್ಬರ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದರಲ್ಲಿ ಕಾಂಗ್ರೆಸ್ ನಿಸ್ಸಿಮ್ ಇದೆ ಎಂದು ಆರೋಪಿಸಿದರು.

ಜಿ ರಾಮ್ ಜಿ. ಯೋಜನೆಯ ಬಗ್ಗೆ ಗ್ರಾಮ ಪಂಚಾಯತಿಯ ಎಲ್ಲ ಸದಸ್ಯರು ಅಧ್ಯಕ್ಷರನ್ನು ಫೆ. 7 ರಂದು ಕರೆದು ಜಿ ರಾಮ್ ಜಿ ಯ ಪ್ರಯೋಜನ ಏನು?  100 ದಿನದಿಂದ 125 ದಿನಕ್ಕೆ ಹೆಚ್ಚಳ ಮಾಡಿರುವುದು,  ನೇರ ಹಣ ವರ್ಗಾವಣೆ ಮಾಡಿರುವುದರ ಪ್ರಯೋಜನದ  ಬಗ್ಗೆ ಜನರಿಗೆ ತಿಳಿಸಲು ಸಮಾವೇಶ ಮಾಡಲು ತೀರ್ಮಾನ ಮಾಡಿದ್ದೇವೆ. ಮಹಾತ್ಮಾಗಾಂಧಿ ರಾಮ ರಾಜ್ಯದಿಂದ ಗ್ರಾಮ ರಾಜ್ಯ ಅಂತ ಹೇಳಿದ್ದಾರೆ. ರಾಮ ಮತ್ತು ಗಾಂಧಿಜಿಯನ್ನು ಬೇರ್ಪಡಿಸಲು ಸಾಧ್ಯಾವಿಲ್ಲ.  ಅನ್ನುವುದನ್ನು ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದರು.

ರಾಜ್ಯದ ಅನುದಾನವಿಲ್ಲ:

ಕೇಂದ್ರದಿಂದ ಹೇಗೆ ರಾಜ್ಯಗಳಿಗೆ ಅನುದಾನ ಬರುತ್ತದೆ. ಹಾಗೇ ಗ್ರಾಮ ಪಂಚಾಯತಿ, ತಾಲೂಕು, ಜಿಲ್ಲಾ ಪಂಚಾಯತಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್‌ಎಫ್‌ಸಿಯಿಂದ 2000 ಕೋಟಿ ರೂ. ಹಣ ರಾಜ್ಯ ಸರ್ಕಾರ ನೀಡಬೇಕು. ಅದನ್ನು ಕೊಡದೇ ಎರಡೂವರೆ ವರ್ಷ ಯಾವುದೇ ಅನುದಾನ ಕೊಡದೇ ಇವರು ಗ್ರಾಮ ವಿಕೇಂದ್ರಿ ಕರಣದ ಬಗ್ಗೆ ಮಾತನಾಡುತ್ತಾರೆ, ಯಾಕೆ ಹಣ ಬಿಡುಗಡೆ ಮಾಡಿಲ್ಲ ಅದನ್ನು ಮೊದಲು ಹೇಳಬೇಕು ಎಂದು ಆಗ್ರಹಿಸಿದರು.


Share this with Friends

Related Post