Sat. Jun 6th, 2026

ಎಸ್ಎಸ್ಎಲ್ ಸಿ ಪರೀಕ್ಷೆ ಕಾಗವಾಡ ವಲಯಕ್ಕೆ ಎರಡನೇ ಸ್ಥಾನ: ಪಿ.ಬಿ‌. ಮಧಭಾವಿ

Share this with Friends

Reporter: Vikil S Hiremath

ಕಾಗವಾಡ: 2025 -26 ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೇಯಲ್ಲಿ ಜಿಲ್ಲೆಗೆ ಕಾಗವಾಡ ಕ್ಷೇತ್ರ ಶಿಕ್ಷಣ ವಲಯಕ್ಕೆ 95.42 ಶೇಕಡಾವಾರು ಫಲಿತಾಂಶದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮಧಭಾವಿ ತಿಳಿಸಿದರು.

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಒಟ್ಟು 2161 ವಿದ್ಯಾರ್ಥಿಗಳು ಪರೀಕ್ಷೇ ಬರೆದಿದ್ದು, 2062 ವಿದ್ಯಾರ್ಥಿಗಳು ಉತ್ತೀರ್ಣಾರಾಗಿದ್ದಾರೆ. ಜೊತೆಗೆ ಒಟ್ಟು ನಾಲ್ಕು ಕಾಗವಾಡ ವಲಯಕ್ಕೆ ಟಾಪರ್ಸ ಆಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

ಒಟ್ಟು 625 ಅಂಕದಲ್ಲಿ ಸಂತೋಷ ರತ್ನಾಪ್ಪಗೋಳ 622 ಅಂಕ ಪಡೆದು ಪ್ರಥಮ ಸ್ಥಾನ, ಯಶೋಧಾ ಮೋರೆ ಹಾಗೂ ಐಶ್ವರ್ಯ ಉಮರಾಣಿ 618 ಅಂಕ ಪಡೆದು ದ್ವೀತೀಯ ಸ್ಥಾನ, ನಿಸರ್ಗ ಖಾನಾಪುರೆ 615 ಅಂಕ ಪಡೆದು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದರು.


Share this with Friends

Related Post