Reporter: Vikil S Hiremath
ಕಾಗವಾಡ: ಆಕ್ರಮ ಚಟುವಟಿಕೆಗಳ ಭಾಗಿಯಾಗಿದ್ದ ಇಬ್ಬರನ್ನ ಮಾನ್ಯ ಉಪವಿಭಾಗಿಧಿಕಾರಿಗಳ ಆದೇಶದ ಮೇರೆಗೆ ಗಡಿ ಪಾರು ಮಾಡಿದ ಘಟನೆ ಕಾಗವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಓ.ಸಿ. ಮತ್ತು ಮಟ್ಕಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ತಕ್ಕೆ ಧಕ್ಕೆಯಂಟು ಮಾಡುತ್ತಿದ್ದ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಮನೋಜ ಕಾಂಬಳೆ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ಹಾಗೂ ಉಗಾರ ಖುರ್ದ ಪಟ್ಟಣದ ಶಬ್ಬೀರ ಪಠಾಣ ಅವರನ್ನು ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ತಿಂಗಳ ಅವಧಿಗೆ 1963 ಕಲಂ ಪ್ರಕಾರ 55 ಹಾಗೂ 56 ಜಿ ರನ್ವಯ ಆದೇಶಿಸಿದ್ದಾರೆ ಎಂದು ಬೆಳಗಾವಿ ಎಸ್ಪಿ ಕೆ.ರಾಮರಾಜನ ತಿಳಿಸಿದ್ದಾರೆ

