Thu. Jun 11th, 2026

ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್ ಪಡೆದಿದ್ದವರಿಗೆ ಹಣ ವಾಪಸ್; ಬಾಲಕರಿಗೂ ಉಚಿತ ಪ್ರಯಾಣ!

Share this with Friends

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈಗಾಗಲೇ ನಗದು ಪಾವತಿಸಿ ಬಸ್ ಪಾಸ್ ಪಡೆದುಕೊಂಡಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯು ಸಂಪೂರ್ಣ ಮೊತ್ತವನ್ನು ಮರುಪಾವತಿ (Refund) ಮಾಡಲಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರವು ‘ಶಕ್ತಿ’ ಯೋಜನೆಯ ಸೌಲಭ್ಯವನ್ನು ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ (ಬಾಲಕರಿಗೂ) ವಿಸ್ತರಿಸಿರುವ ಹಿನ್ನೆಲೆಯಲ್ಲಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಕಲ್ಪಿಸುವುದರಿಂದ ಸಾರಿಗೆ ಸಂಸ್ಥೆಗಳಿಗೆ ಉಂಟಾಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಸರ್ಕಾರವು ಮೊದಲ ಹಂತದಲ್ಲಿ ₹86.86 ಕೋಟಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಿದೆ.

ಯಾವ ನಿಗಮಕ್ಕೆ ಎಷ್ಟು ಅನುದಾನ?

ಕೆಎಸ್‌ಆರ್‌ಟಿಸಿ: ₹29.38 ಕೋಟಿ

ವಾಯವ್ಯ ಸಾರಿಗೆ (NWKRTC): ₹25.19 ಕೋಟಿ

ಬಿಎಂಟಿಸಿ (BMTC): ₹19.44 ಕೋಟಿ

ಕಲ್ಯಾಣ ಕರ್ನಾಟಕ (KKRTC): ₹12.83 ಕೋಟಿ

ಮರುಪಾವತಿ ಪಡೆಯುವುದು ಹೇಗೆ?

ಈಗಾಗಲೇ ಹಣ ನೀಡಿ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳು ಹಾಗೂ ಹೊಸದಾಗಿ ಉಚಿತ ಪಾಸ್ ಬಯಸುವ ಶಾಲಾ, ಕಾಲೇಜು, ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ‘ಸೇವಾ ಸಿಂಧು’ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲೂ ಇದಕ್ಕೆ ಅವಕಾಶವಿದ್ದು, ಸಾರಿಗೆ ಇಲಾಖೆಯು ಶೀಘ್ರದಲ್ಲೇ ಮರುಪಾವತಿಯ ನಿಖರ ಪ್ರಕ್ರಿಯೆಯ ಮಾರ್ಗಸೂಚಿಯನ್ನು ಪ್ರಕಟಿಸಲಿದೆ.

 


Share this with Friends

Related Post