ಬೆಂಗಳೂರು: ಅಂತರರಾಷ್ಟ್ರೀಯ ರಕ್ತದಾನಿಗಳ ದಿನದ ಪ್ರಯುಕ್ತ ಉತ್ತರಹಳ್ಳಿಯ ನ್ಯಾನೋ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪದ್ಮನಾಭನಗರದ ಬಿಎಸ್‌ಕೆ ಜೀವಾಶ್ರಯ ರಕ್ತ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಈ ರಕ್ತದಾನ ಶಿಬಿರದಲ್ಲಿ ಒಟ್ಟು 43 ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ.


ನ್ಯಾನೋ ಆಸ್ಪತ್ರೆಗಳು (ಉತ್ತರಹಳ್ಳಿ, ಬನ್ನೇರುಘಟ್ಟ ರಸ್ತೆ) ಮತ್ತು ಟ್ರೂಸ್ಕಾನ್ ಡಯಾಗ್ನಾಸ್ಟಿಕ್ಸ್ (7ನೇ ಹಂತ, 2ನೇ ಹಂತ) ಸಂಸ್ಥೆಗಳ ಸಂಸ್ಥಾಪಕರಾದ ಡಾ. ಮೋಹನ್ ಎಂ.ಆರ್. ಹಾಗೂ ಡಾ. ಶೈಲಜಾ ವಿ. ಅವರ ಮಾರ್ಗದರ್ಶನದಲ್ಲಿ ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನ್ಯಾನೋ ಆಸ್ಪತ್ರೆಯ ಉತ್ತರಹಳ್ಳಿ ಶಾಖೆಯ ಆಡಳಿತಾಧಿಕಾರಿಯಾದ ನಿಸರ್ಗ ಗೌಡ ಅವರು ಈ ರಕ್ತದಾನ ಶಿಬಿರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ನಿರ್ವಹಿಸಿದರು.


ತುರ್ತು ಸಂದರ್ಭಗಳಲ್ಲಿ ರೋಗಿಗಳ ಪ್ರಾಣ ಉಳಿಸಲು ರಕ್ತದಾನ ಅತ್ಯಂತ ಅವಶ್ಯಕವಾಗಿದ್ದು, ಆಸ್ಪತ್ರೆಯ ಸಿಬ್ಬಂದಿಯೇ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಯಶಸ್ವಿ ಶಿಬಿರದ ಸಂಘಟನೆಯಲ್ಲಿ ಪ್ರಮೋದ್, ಅಭಿಲಾಷ್ ಗೌಡ, ಬಸವಂತ್ ಗೌಡ, ಅಖಿಲ್, ಹೇಮರಾಜ್ ಮತ್ತು ಹೇಮಂತ್ ಅವರನ್ನೊಳಗೊಂಡ ಆಸ್ಪತ್ರೆಯ ಯುವ ಸಿಬ್ಬಂದಿ ತಂಡ ಶ್ರಮಿಸಿತು. ವೈದ್ಯಕೀಯ ಸಿಬ್ಬಂದಿಯ ಈ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.


ಇದೇ ವೇಳೆ ರಕ್ತ ಕೇಂದ್ರದ ವೈದ್ಯಾಧೀಕಾರಿಗಳಾದ ಪವನ್ ಕೇಸರಿ, ತಾಂತ್ರಿಕ ಮೇಲ್ವಿಚಾರಕರಾದ ಎಂ. ಮಂಜು, ಟ್ರಸ್ಟಿ ರಚನಾ ಮಂಜುನಾಥ್, ತಂತ್ರಜ್ಞರಾದ ಶ್ವೇತಾ, ಯಶವಂತ್, ಆಂಬುಲೆನ್ಸ್ ಚಾಲಕರಾದ ಜಗನ್ನಾಥ್ ಎಲ್ಲರ ನಿಸ್ವಾರ್ಥ ಸೇವೆ ಈ ರಕ್ತದಾನ ಶಿಬಿರ ಯಶಸ್ಸಿ ಆಗಲು ಸಹಕಾರಿಯಾಯಿತು.


