Thu. Aug 13th, 2026

ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ: ಸಂತಾಪ ಸೂಚಿಸಿ ಕಲಾಪ ಮುಂದೂಡಿಕೆ

Share this with Friends

ಬೆಂಗಳೂರು: ವಿಧಾನಮಂಡಲದ ಹೊಸ ಅಧಿವೇಶನದ ಆರಂಭದ ದಿನದಂದು ಇತ್ತೀಚೆಗೆ ನಿಧನರಾದ ನಾಡಿನ ಪ್ರಮುಖ ರಾಜಕೀಯ ಧುರಿತರು, ಮಾಜಿ ಶಾಸಕರು ಹಾಗೂ ಗಣ್ಯರಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಎರಡೂ ಸದನಗಳಲ್ಲಿ ಭಾವಪೂರ್ಣ ಸಂತಾಪ ಸೂಚಿಸಲಾಯಿತು. ಸಂಸದೀಯ ನಿಯಮಾವಳಿಗಳಂತೆ ಕಲಾಪ ಆರಂಭವಾಗುತ್ತಿದ್ದಂತೆ ಮೊದಲಿಗೆ ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಳ್ಳಲಾಯಿತು.

ಇತ್ತೀಚೆಗೆ ಅಗಲಿದ ನಾಡಿನ ಹಿರಿಯ ನಾಯಕರು, ಮಾಜಿ ಸದಸ್ಯರು ಹಾಗೂ ಗಣ್ಯರ ದೇಶಸೇವೆ, ಸಂಸದೀಯ ಪಟುತ್ವ ಮತ್ತು ಸಮಾಜಮುಖಿ ಕಾರ್ಯಗಳನ್ನು ಉಭಯ ಸದನಗಳು ಮುಕ್ತಕಂಠದಿಂದ ಸ್ಮರಿಸಿದವು.

ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಸಂತಾಪ

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರ ಪೀಠದಿಂದ ಸಂತಾಪ ನಿರ್ಣಯ ಮಂಡಿಸಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಗಲಿದ ಗಣ್ಯರ ಸ್ಮರಣೆ ಮಾಡಿ ಮಾತನಾಡಿ, “ನಿಧನರಾದ ನಾಯಕರುಗಳು ಪಕ್ಷಾತೀತವಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಬಡ ವರ್ಗದ ಜನರ ಕಲ್ಯಾಣಕ್ಕಾಗಿ ಅವರು ಶ್ರಮಿಸಿದ ರೀತಿ ಸದಾ ಮಾದರಿಯಾಗಿದೆ” ಎಂದು ಕಂಬನಿ ಮಿಡಿದರು.

ಆಡಳಿತ ಮತ್ತು ಪ್ರತಿಪಕ್ಷಗಳ ಹಿರಿಯ ಶಾಸಕರು ಕೂಡ ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಅಗಲಿದ ಗಣ್ಯರೊಂದಿಗಿನ ತಮ್ಮ ಹಳೆಯ ರಾಜಕೀಯ ಒಡನಾಟದ ನೆನಪುಗಳನ್ನು ಹಂಚಿಕೊಂಡರು. ಗಣ್ಯರ ಗೌರವಾರ್ಥವಾಗಿ ಸದನದಲ್ಲಿ ಎರಡು ನಿಮಿಷಗಳ ಕಾಲ ಎದ್ದು ನಿಂತು ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಂತಾಪ:

ಮಾಜಿ ಸಚಿವ ಡಿ ಸುಧಾಕರ್

ಮಾಜಿ ಸಚಿವ ಸಿ.ವೀರಣ್ಣ

ಮಾಜಿ ಸಚಿವ ವೆಂಕಟರಮಣಪ್ಪ.

ಮಾಜಿ ಸಚಿವ ರಾಮಚಂದ್ರೇಗೌಡ.,

ಮಾಜಿ ಶಾಸಕರಾದ ಕೆ ಆರ್ ಶ್ರೀನಿವಾಸಯ್ಯ

ಮಾಜಿ ಶಾಸಕ ಪುಟ್ಟ ರಂಗನಾಥ,

ಮಾಜಿ ಶಾಸಕ ಸೈಯದ್ ಯಾಶೀನ್,

ಮಾಜಿ ಶಾಸಕ ವಿ ಶ್ರೀನಿವಾಸನ್.,

ಮಾಜಿ ಶಾಸಕ ಚಂದ್ರಶೇಖರಪ್ಪ

ಮಾಜಿ ಶಾಸಕ ವೆಂಕಟಚಲಯ್ಯ.,

ಮಾಜಿ ಶಾಸಕ ಎಸ್ ಕೃಷ್ಣಪ್ಪ

ಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ.

ಗಾಯಕಿರಾದ ಎಸ್ ಜಾನಕಿ

ಆಶಾ ಬೋಸ್ಲೆ.,

ಚೆನ್ನಮ್ಮ ದೇವೆಗೌಡ ಅವರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

ವಿಧಾನ ಪರಿಷತ್ತಿನಲ್ಲೂ ಮೌನಾಚರಣೆ

ಇತ್ತ ಮೇಲ್ಮನೆಯಾದ ವಿಧಾನ ಪರಿಷತ್ತಿನಲ್ಲೂ ಸಭಾಪತಿಗಳ ನೇತೃತ್ವದಲ್ಲಿ ಸಂತಾಪ ಸೂಚನಾ ಪ್ರಕ್ರಿಯೆ ಜರುಗಿತು. ಮೇಲ್ಮನೆಯ ನಾಯಕರು ಮತ್ತು ವಿವಿಧ ಪಕ್ಷಗಳ ಸದಸ್ಯರು ಅಗಲಿದ ಗಣ್ಯರ ಸಂಸದೀಯ ಅನುಭವ ಹಾಗೂ ನಾಡಿಗೆ ಅವರು ನೀಡಿದ ಕೊಡುಗೆಯನ್ನು ಅತ್ಯಂತ ಗೌರವದಿಂದ ಸ್ಮರಿಸಿದರು. ಉಭಯ ಸದನಗಳಲ್ಲಿ ಸಂತಾಪ ಪ್ರಕ್ರಿಯೆ ಪೂರ್ಣಗೊಂಡ ನಂತರ, ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸುವ ಸೂಚಕವಾಗಿ ಅಂದಿನ ಕಲಾಪವನ್ನು ಮುಂದೂಡಲಾಯಿತು.


Share this with Friends

Related Post