Tue. Oct 6th, 2026

ಕರುನಾಡ ಉತ್ಸವ: ಕರವೇ ಸಿಂಹಪಡೆಯಿಂದ ನವೆಂಬರ್ 15ರಂದು ‘ಕರುನಾಡ ರತ್ನ ಪ್ರಶಸ್ತಿ’ ಪ್ರದಾನ

Share this with Friends

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ವಿಶೇಷ ಗೌರವ ಸಮರ್ಪಿಸಲು ಕರ್ನಾಟಕ ರಕ್ಷಣಾ ವೇದಿಕೆ ಸಿಂಹಪಡೆ (ನೋಂ.) ಮುಂದಾಗಿದೆ. ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗಿರುವ ‘ಕರುನಾಡ ಉತ್ಸವ’ ವಿಶೇಷ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ನರಸಿಂಹ ಪ್ರಸಾದ್ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ ಹಾಗೂ ಸಮಾಜದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಅರ್ಹ ಸಾಧಕರಿಗೆ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ವಿವಿಧ ವಿಭಾಗಗಳ ಪ್ರಶಸ್ತಿಗಳ ವಿವರ:

ಸಂಘಟನೆಯ ವತಿಯಿಂದ ಈ ಬಾರಿ ಒಟ್ಟು 7 ಪ್ರಮುಖ ವಿಭಾಗಗಳಲ್ಲಿ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ:

ಕರುನಾಡ ವೈದ್ಯ ರತ್ನ (ವೈದ್ಯಕೀಯ ಕ್ಷೇತ್ರ)

ಕರುನಾಡ ನ್ಯಾಯ ರತ್ನ (ನ್ಯಾಯಾಂಗ ಕ್ಷೇತ್ರ)

ಕರುನಾಡ ವಿದ್ಯಾ ರತ್ನ (ಶಿಕ್ಷಣ ಕ್ಷೇತ್ರ)

ಕರುನಾಡ ಕಲಾ ರತ್ನ (ಕಲಾ ಕ್ಷೇತ್ರ)

ಕರುನಾಡ ಸೇವಾ ರತ್ನ (ಸಮಾಜ ಸೇವೆ)

ಕರುನಾಡ ಆರಕ್ಷಕ ರತ್ನ (ಪೊಲೀಸ್ ಇಲಾಖೆ)

ಕರುನಾಡ ಸಾಹಿತ್ಯ ರತ್ನ (ಸಾಹಿತ್ಯ ಕ್ಷೇತ್ರ)

ಕಾರ್ಯಕ್ರಮದ ವಿವರ:

ಸ್ಥಳ: ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.

ದಿನಾಂಕ: 15 ನವೆಂಬರ್ 2026, ಭಾನುವಾರ

ಸಮಯ: ಮಧ್ಯಾಹ್ನ 3:00 ಗಂಟೆಯಿಂದ

ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮತ್ತು ನಾಮನಿರ್ದೇಶನದ ನೋಂದಣಿ ಪ್ರಕ್ರಿಯೆಗಳ ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಘಟಕರ ಅಧಿಕೃತ ಸಂಪರ್ಕ ಸಂಖ್ಯೆಗಳಾದ 8618887479 ಅಥವಾ 9742088412 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದ್ದಾರೆ.

 


Share this with Friends

Related Post