ವರದಿ: ವಿಕಿಲ ಎಸ್ ಹಿರೇಮಠ
ಕಾಗವಾಡ: ವಾಲ್ಮೀಕಿ ಸಮುದಾಯದ ನಕಲಿ ಜಾತಿ ಪ್ರಮಾಣ ಪತ್ರ ದುರುಪಯೋಗ ಪಡೆಸಿಕೊಂಡ ಹಿನ್ನಲೆಯಲ್ಲಿ ತಹಶೀಲ್ದಾರ ಕಾರ್ಯಾಲಯದ ಎದುರು ವಾಲ್ಮೀಕಿ ಸಮುದಾಯದ ಅಧ್ಯಕ್ಷರಾದ ರಮೇಶ ನಾಯಕ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮಾಡಲಾಗುತ್ತಿದೆ.
ಈ ಸಮಯದಲ್ಲಿ ಉತ್ತರ ಕರ್ನಾಟಕ ಸುದ್ದಿ ವಾಹಿನಿ ಜೊತೆ ರಮೇಶ ನಾಯಕ ಮಾತನಾಡಿ ಸುಮಾರು ಎರಡು ಸಾವಿರ ಅನ್ಯ ಜಾತಿಯ ಅಭ್ಯರ್ಥಿಗಳು ವಾಲ್ಮೀಕಿ ಸಮುದಾಯದ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಇದಕ್ಕೆ ಅಧಿಕಾರಿಗಳ ಸಾಥ ಇದ್ದು ಮೇಲಾಧಿಕಾರಿಗಳ ಸ್ಥಳಕ್ಕೆ ಬಂದರೆ ನಕಲಿ ಪ್ರಮಾಣಪತ್ರಗಳನ್ನು ತೋರಿಸುತ್ತೇವೆ ಎಂದು ಹೇಳಿದರು.
ಇನ್ನು ಅಧಿಕಾರಿಗಳು ಯಾವುದೇ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿದ ಹಿನ್ನಲೆಯಲ್ಲಿ ಈ ರೀತಿ ನಡೆದಿದೆ. ಉಪವಾಸ ಸ್ಥಳಕ್ಕೆ ಗ್ರೇಡ್ -2 ತಹಶೀಲ್ದಾರ ರಶ್ಮಿ ಜಕಾತಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ರಾಘವೇಂದ್ರ ಘೋರಪಡೆ ಭೇಟಿ ನೀಡಿದರು ಸಹ ಧರಣಿ ನಿರತರು ಧರಣಿಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ

