Wed. Nov 4th, 2026

ರೈಲು ಪ್ರಯಾಣಿಕರ ಗಮನಕ್ಕೆ: ಜನವರಿ 2027ರಿಂದ ಮಾಲ್ಗುಡಿ, ಗರೀಬ್ ರಥ್ ಸೇರಿದಂತೆ 6 ಪ್ರಮುಖ ರೈಲುಗಳ ಸಂಖ್ಯೆ ಪರಿಷ್ಕರಣೆ

Share this with Friends

ಬೆಂಗಳೂರು: ರೈಲು ಪ್ರಯಾಣಿಕರ ಅನುಕೂಲ ಹಾಗೂ ತಾಂತ್ರಿಕ ಕಾರಣಗಳಿಗಾಗಿ ದಕ್ಷಿಣ ರೈಲ್ವೆಯು ತನ್ನ ವ್ಯಾಪ್ತಿಯ ಆರು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಸಂಖ್ಯೆಗಳನ್ನು ಪರಿಷ್ಕರಿಸಿದೆ. ನೂತನ ರೈಲು ಸಂಖ್ಯೆಗಳು ಮುಂಬರುವ ಜನವರಿ 2027ರಿಂದ ಜಾರಿಗೆ ಬರಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮೈಸೂರು (ಅಶೋಕಪುರಂ) ನಡುವೆ ಸಂಚರಿಸುವ ಜನಪ್ರಿಯ ಮಾಲ್ಗುಡಿ ಎಕ್ಸ್‌ಪ್ರೆಸ್, ಬೆಂಗಳೂರು-ತಿರುಪತಿ ಎಕ್ಸ್‌ಪ್ರೆಸ್ ಹಾಗೂ ಮುಂಬೈ-ತಿರುವನಂತಪುರಂ ನಡುವಿನ ಗರೀಬ್ ರಥ್ ರೈಲುಗಳ ಸಂಖ್ಯೆಗಳು ಬದಲಾಗುತ್ತಿದ್ದು, ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸುವಾಗ ಈ ಹೊಸ ಸಂಖ್ಯೆಗಳನ್ನು ಗಮನಿಸಲು ಕೋರಲಾಗಿದೆ.

ರೈಲು ಸಂಖ್ಯೆಗಳ ಪರಿಷ್ಕರಣೆ:

ದಕ್ಷಿಣ ರೈಲ್ವೆಯು ಜನವರಿ 2027ರಿಂದ ಜಾರಿಗೆ ಬರುವಂತೆ ಆರು ರೈಲುಗಳ ಸಂಖ್ಯೆಗಳನ್ನು ಪರಿಷ್ಕರಿಸಿದೆ. ಪರಿಷ್ಕೃತ ರೈಲು ಸಂಖ್ಯೆಗಳು ಮತ್ತು ಅವು ಜಾರಿಗೆ ಬರುವ ದಿನಾಂಕಗಳು ಈ ಕೆಳಗಿನಂತಿವೆ:

1. ರೈಲು ಸಂಖ್ಯೆ 20623 ಅಶೋಕಪುರಂ–ಕೆಎಸ್ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 01.01.2027 ರಿಂದ ‘16123’ ಎಂದು ಪರಿಷ್ಕರಣೆಗೊಳ್ಳಲಿದೆ.

2. ರೈಲು ಸಂಖ್ಯೆ 20624 ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮಾಲ್ಗುಡಿ ಡೈಲಿ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 01.01.2027 ರಿಂದ ‘16124’ ಎಂದು ಪರಿಷ್ಕರಣೆಗೊಳ್ಳಲಿದೆ.

3. ರೈಲು ಸಂಖ್ಯೆ 22617 ತಿರುಪತಿ–ಎಸ್ಎಂವಿಟಿ ಬೆಂಗಳೂರು ತ್ರಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 01.01.2027 ರಿಂದ ‘16627’ ಎಂದು ಪರಿಷ್ಕರಣೆಗೊಳ್ಳಲಿದೆ.

4. ರೈಲು ಸಂಖ್ಯೆ 22618 ಎಸ್ಎಂವಿಟಿ ಬೆಂಗಳೂರು–ತಿರುಪತಿ ತ್ರಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 02.01.2027 ರಿಂದ ‘16628’ ಎಂದು ಪರಿಷ್ಕರಣೆಗೊಳ್ಳಲಿದೆ.

5. ರೈಲು ಸಂಖ್ಯೆ 12201 ಲೋಕಮಾನ್ಯ ತಿಲಕ್ ಟರ್ಮಿನಸ್–ತಿರುವನಂತಪುರಂ ನಾರ್ತ್ ದ್ವಿ-ಸಾಪ್ತಾಹಿಕ ಗರೀಬ್ ರಥ್ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 01.01.2027 ರಿಂದ ‘16371’ ಎಂದು ಪರಿಷ್ಕರಣೆಗೊಳ್ಳಲಿದೆ.

6. ರೈಲು ಸಂಖ್ಯೆ 12202ತಿ ರುವನಂತಪುರಂ ನಾರ್ತ್–ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಗರೀಬ್ ರಥ್ ಎಕ್ಸ್’ಪ್ರೆಸ್ ರೈಲಿನ ಸಂಖ್ಯೆಯು 03.01.2027 ರಿಂದ ‘16372’ ಎಂದು ಪರಿಷ್ಕರಣೆಗೊಳ್ಳಲಿದೆ.

ರೈಲು ಸಂಖ್ಯೆಗಳು ಬದಲಾಗುತ್ತಿದ್ದರೂ ಸಹ ಅವುಗಳ ಸಂಚಾರದ ಸಮಯ, ನಿಲುಗಡೆ ಹಾಗೂ ದಿನಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಕೇವಲ ತಾಂತ್ರಿಕ ವರ್ಗೀಕರಣಕ್ಕಾಗಿ ಸಂಖ್ಯೆಗಳನ್ನು ಬದಲಾಯಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post