Mon. Nov 9th, 2026

ಕಿಚ್ಚ ಸುದೀಪ್-ನಿರ್ದೇಶಕ ಪ್ರೇಮ್ ಕಾಂಬಿನೇಶನ್‌ನ ಹೊಸ ಚಿತ್ರ: ಶೀಘ್ರದಲ್ಲೇ ‘ಟೈಟಲ್ ಟೀಸರ್’ ದಿನಾಂಕ ಅನಾವರಣ!

Share this with Friends

ಬೆಂಗಳೂರು: ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಹಾಗೂ ಜೋಗಿ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರೇಮ್ ಕಾಂಬಿನೇಶನ್‌ನ ಬಹುನಿರೀಕ್ಷಿತ ಸಿನಿಮಾದ ಮಹತ್ವದ ಅಪ್‌ಡೇಟ್ ಒಂದು ಹೊರಬಿದ್ದಿದೆ. ಈ ಕ್ರೇಜಿ ಚಿತ್ರದ ‘ಟೈಟಲ್ ಟೀಸರ್’ (Title Teaser) ಬಿಡುಗಡೆಯಾಗುವ ಅಧಿಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ನಟ ಸುದೀಪ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಬಿಗ್ ಬಜೆಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಕೆಂಪೇಗೌಡ’ ಸೇರಿದಂತೆ ಕಿಚ್ಚನ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಅರ್ಜುನ್ ಜನ್ಯ, ಪ್ರೇಮ್ ಹಾಗೂ ಸುದೀಪ್ ಅವರ ಈ ಹೊಸ ಚಿತ್ರಕ್ಕೆ ಟ್ಯೂನ್ ಹಾಕುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.

ಈಗಾಗಲೇ ಪ್ರೇಮ್ ಮತ್ತು ಸುದೀಪ್ ಸಿನಿಮಾ ಘೋಷಣೆಯಾದಾಗಿನಿಂದಲೂ ಚಿತ್ರದ ಶೀರ್ಷಿಕೆ ಏನಾಗಿರಬಹುದು ಎಂಬ ಚರ್ಚೆ ಗಾಂಧಿನಗರದಲ್ಲಿ ಜೋರಾಗಿ ನಡೆದಿತ್ತು. ಇದೀಗ ಚಿತ್ರತಂಡವೇ ಅಧಿಕೃತವಾಗಿ ಟೈಟಲ್ ಟೀಸರ್ ಅನೌನ್ಸ್‌ಮೆಂಟ್ ಡೇಟ್ ಘೋಷಿಸಲು ಸಜ್ಜಾಗಿದ್ದು, ಶೀಘ್ರದಲ್ಲೇ ಚಿತ್ರದ ಭವ್ಯವಾದ ಶೀರ್ಷಿಕೆ ಕನ್ನಡಿಗರ ಮುಂದೆ ಅನಾವರಣಗೊಳ್ಳಲಿದೆ.

 

 


Share this with Friends

Related Post