Sun. Nov 22nd, 2026

2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ; 18 ದಿನ ಸಾರ್ವತ್ರಿಕ ರಜೆ

Share this with Friends

ಬೆಂಗಳೂರು: ರಾಜ್ಯ ಸರ್ಕಾರವು 2027ನೇ ಸಾಲಿಗೆ ಅನ್ವಯವಾಗುವಂತೆ ಸರ್ಕಾರಿ ಕಚೇರಿಗಳಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ 21ರಂದು ರಾಜ್ಯಪಾಲರ ಆಜ್ಞಾನುಸಾರ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದ್ದು, ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳ ಜೊತೆಗೆ ಒಟ್ಟು 18 ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.

2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಸಾರ್ವತ್ರಿಕ ರಜಾ ದಿನಗಳು

1.

15.01.2027

ಶುಕ್ರವಾರ

ಮಕರ ಸಂಕ್ರಾಂತಿ / ಉತ್ತರಾಯಣ ಪುಣ್ಯಕಾಲ

2.

26.01.2027

ಮಂಗಳವಾರ

ಗಣರಾಜ್ಯೋತ್ಸವ ದಿನ

3.

06.03.2027

ಶನಿವಾರ

ಮಹಾ ಶಿವರಾತ್ರಿ

4.

10.03.2027

ಬುಧವಾರ

ಖುತುಬ್-ಎ-ರಂಜಾನ್

5.

26.03.2027

ಶುಕ್ರವಾರ

ಗುಡ್ ಫ್ರೈಡೆ

6.

07.04.2027

ಬುಧವಾರ

ಚಾಂದ್ರಮಾನ ಯುಗಾದಿ

7.

14.04.2027

ಬುಧವಾರ

ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ

8.

01.05.2027

ಶನಿವಾರ

ಕಾರ್ಮಿಕ ದಿನಾಚರಣೆ

9.

17.05.2027

ಸೋಮವಾರ

ಬಕ್ರೀದ್

10.

16.06.2027

ಬುಧವಾರ

ಮೊಹರಂ ಕಡೆ ದಿನ

11.

04.09.2027

ಶನಿವಾರ

ವರಸಿದ್ಧಿ ವಿನಾಯಕ ವ್ರತ

12.

29.09.2027

ಬುಧವಾರ

ಮಹಾಲಯ ಅಮಾವಾಸ್ಯೆ

13.

02.10.2027

ಶನಿವಾರ

ಗಾಂಧಿ ಜಯಂತಿ

14.

15.10.2027

ಶುಕ್ರವಾರ

ವಾಲ್ಮೀಕಿ ಜಯಂತಿ

15.

28.10.2027

ಗುರುವಾರ

ನರಕ ಚತುರ್ದಶಿ

16.

30.10.2027

ಶನಿವಾರ

ದೀಪಾವಳಿ

17.

01.11.2027

ಸೋಮವಾರ

ಕನ್ನಡ ರಾಜ್ಯೋತ್ಸವ

18.

16.11.2027

ಮಂಗಳವಾರ

ಕನಕದಾಸ ಜಯಂತಿ

ಅಧಿಸೂಚನೆಯ ಪ್ರಮುಖ ಅಂಶಗಳು

ಭಾನುವಾರ ಮತ್ತು ಶನಿವಾರ ಬರುವ ಹಬ್ಬಗಳು: ಭಾನುವಾರದಂದು ಬರುವ ಮಹಾವೀರ ಜಯಂತಿ (18.04.2027), ಬಸವೇಶ್ವರ ಜಯಂತಿ (09.05.2027), ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್-ಮಿಲಾದ್ (15.08.2027) ಮತ್ತು ವಿಜಯದಶಮಿ (10.10.2027) ಹಬ್ಬಗಳನ್ನು ಈ ಪಟ್ಟಿಯಲ್ಲಿ ಪ್ರತ್ಯೇಕವಾಗಿ ನಮೂದಿಸಿಲ್ಲ. ಅಂತೆಯೇ, ಎರಡನೇ ಶನಿವಾರ ಬರುವ ಮಹಾನವಮಿ/ಆಯುಧಪೂಜೆ (09.10.2027) ಹಾಗೂ ನಾಲ್ಕನೇ ಶನಿವಾರ ಬರುವ ಕ್ರಿಸ್‌ಮಸ್ (25.12.2027) ಹಬ್ಬಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಕೊಡಗು ಜಿಲ್ಲೆಗೆ ಸ್ಥಳೀಯ ರಜೆ: ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಕೈಲ್ ಮುಹೂರ್ತ (03.09.2027 – ಶುಕ್ರವಾರ), ತುಲಾ ಸಂಕ್ರಮಣ (18.10.2027 – ಸೋಮವಾರ) ಮತ್ತು ಹುತ್ತರಿ ಹಬ್ಬ (13.12.2027 – ಸೋಮವಾರ) ಆಚರಿಸಲು ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಪರಿಮಿತ ರಜೆ (RH): ಸಾರ್ವತ್ರಿಕ ರಜಾ ದಿನಗಳ ಜೊತೆಗೆ ರಾಜ್ಯ ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಎರಡು ದಿನಗಳಿಗೆ ಮೀರದಂತೆ ಪರಿಮಿತ ರಜೆಯನ್ನು ಬಳಸಿಕೊಳ್ಳಬಹುದು. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ.

 


Share this with Friends

Related Post