ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಕೇರಳದ ವಿವಿಧ ನಿಲ್ದಾಣಗಳಿಗೆ ಸಂಚರಿಸುತ್ತಿರುವ ಎಂಟು ವಿಶೇಷ ರೈಲುಗಳ ಸೇವಾವಧಿಯನ್ನು 2027ರ ಜನವರಿ ಅಂತ್ಯದವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ವಿಸ್ತರಿಸಲಾದ ರೈಲುಗಳ ವಿವರ:
ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (ಎಸ್‌ಎಂವಿಟಿ) ಬೆಂಗಳೂರು ಮತ್ತು ತಿರುವನಂತಪುರಂ ನಾರ್ತ್ ನಡುವೆ ಸಂಚರಿಸುವ ಪ್ರತಿ ಶುಕ್ರವಾರದ ವಿಶೇಷ ರೈಲು (ಸಂಖ್ಯೆ 06555) ಡಿಸೆಂಬರ್ 4ರಿಂದ 2027ರ ಜನವರಿ 29ರವರೆಗೆ ಹಾಗೂ ಪ್ರತಿ ಭಾನುವಾರದ ಮರುಪ್ರಯಾಣದ ರೈಲು (06556) ಡಿಸೆಂಬರ್ 6ರಿಂದ ಜನವರಿ 31ರವರೆಗೆ ವಿಸ್ತರಣೆಯಾಗಿದೆ. ಅದೇ ರೀತಿ, ಪ್ರತಿ ಸೋಮವಾರ ಬೆಂಗಳೂರಿನಿಂದ ಹೊರಡುವ ರೈಲು (06523) ಡಿಸೆಂಬರ್ 7ರಿಂದ ಜನವರಿ 25ರವರೆಗೆ ಹಾಗೂ ಪ್ರತಿ ಮಂಗಳವಾರದ ರೈಲು (06524) ಡಿಸೆಂಬರ್ 8ರಿಂದ ಜನವರಿ 26ರವರೆಗೆ ಸಂಚರಿಸಲಿದೆ.
ಜೊತೆಗೆ, ಪ್ರತಿ ಬುಧವಾರ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡುವ ವಿಶೇಷ ರೈಲು (06547) ಡಿಸೆಂಬರ್ 2ರಿಂದ ಜನವರಿ 27ರವರೆಗೆ ಮತ್ತು ಪ್ರತಿ ಗುರುವಾರ ತಿರುವನಂತಪುರಂ ನಾರ್ತ್‌ನಿಂದ ಹೊರಡುವ ರೈಲು (06548) ಡಿಸೆಂಬರ್ 3ರಿಂದ ಜನವರಿ 28ರವರೆಗೆ ಸೇವೆ ಮುಂದುವರಿಸಲಿದೆ.
ಹುಬ್ಬಳ್ಳಿ–ಕೊಲ್ಲಂ ರೈಲು ವಿಸ್ತರಣೆ ಮತ್ತು ಸಮಯ ಪರಿಷ್ಕರಣೆ:
ಪ್ರತಿ ಭಾನುವಾರ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡುವ ವಿಶೇಷ ರೈಲು (07313) ಡಿಸೆಂಬರ್ 6ರಿಂದ 2027ರ ಜನವರಿ 17ರವರೆಗೆ ಹಾಗೂ ಪ್ರತಿ ಸೋಮವಾರ ಕೊಲ್ಲಂನಿಂದ ಹೊರಡುವ ರೈಲು (07314) ಡಿಸೆಂಬರ್ 7ರಿಂದ ಜನವರಿ 18ರವರೆಗೆ ವಿಸ್ತರಣೆಯಾಗಿದೆ.
ಇದೇ ವೇಳೆ, ಹುಬ್ಬಳ್ಳಿ–ಕೊಲ್ಲಂ ವಿಶೇಷ ರೈಲಿನ (07313) ಮಾರ್ಗಮಧ್ಯದ ನಿಲ್ದಾಣಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಹೊಸ ವೇಳಾಪಟ್ಟಿಯಂತೆ ಈ ರೈಲು ಸೇಲಂ (ಬೆಳಗಿನ ಜಾವ 03:07/03:10), ಈರೋಡ್ (04:00/04:10), ತಿರುಪ್ಪೂರ್ (04:53/04:55), ಪೋದನೂರ್ (06:23/06:25), ಪಾಲಕ್ಕಾಡ್ (07:37/07:40), ತ್ರಿಶೂರ್ (09:40/09:43), ಆಲುವಾ (10:47/10:49), ಎರ್ನಾಕುಲಂ ಟೌನ್ (11:15/11:20) ಹಾಗೂ ಕೊಟ್ಟಾಯಂ (ಮಧ್ಯಾಹ್ನ 12:22/12:25) ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ಬಳಿಕ ಚಂಗನಸೇರಿ (12:40/12:41), ತಿರುವಲ್ಲಾ (12:51/12:52), ಚೆಂಗನ್ನೂರ್ (13:01/13:03), ಮಾವೇಲಿಕ್ಕರಾ (13:12/13:13), ಕಾಯಂಕುಳಂ (13:23/13:25), ಕರುನಾಗಪ್ಪಳ್ಳಿ (13:39/13:40) ಮತ್ತು ಸಸ್ಥಾನಕೊಟ್ಟ (13:49/13:50) ಮಾರ್ಗವಾಗಿ ಸಂಚರಿಸಿ ಮಧ್ಯಾಹ್ನ 3:00 ಗಂಟೆಗೆ ಕೊಲ್ಲಂ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

