Wed. Nov 25th, 2026

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.7ರಿಂದ ‘ಪುಸ್ತಕೋತ್ಸವ’ ಮಳಿಗೆಗಳಿಗಾಗಿ ಪ್ರಕಾಶಕರು, ಮಾರಾಟಗಾರರಿಂದ ಅರ್ಜಿ ಆಹ್ವಾನ

Share this with Friends

ಬೆಂಗಳೂರು : ಸಾರ್ವಜನಿಕರಿಗೆ ಅಮೂಲ್ಯ ಕೃತಿಗಳ ಪರಿಚಯ ಹಾಗೂ ಖರೀದಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಡಿಸೆಂಬರ್ 7 ರಿಂದ 10ರವರೆಗೆ ‘ಪುಸ್ತಕೋತ್ಸವ-ಪುಟಗಳತ್ತ ಪಯಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಉತ್ಸವದಲ್ಲಿ ಮಳಿಗೆಗಳನ್ನು ತೆರೆಯಲು ರಾಜ್ಯದ ಪ್ರಕಾಶಕರು ಹಾಗೂ ಪುಸ್ತಕ ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 75 ಮಳಿಗೆಗಳನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು. ಆಸಕ್ತರು ಪ್ರತಿ ಮಳಿಗೆಗೆ ರೂ. 1,000 ಭದ್ರತಾ ಠೇವಣಿಯನ್ನು ‘ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು’ ಇವರ ಹೆಸರಿನಲ್ಲಿ ಡಿ.ಡಿ. (DD) ಮೂಲಕ ಸಲ್ಲಿಸಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ನಮೂನೆಗಳನ್ನು ಬೆಂಗಳೂರಿನ ವಿಧಾನಸೌಧದಲ್ಲಿರುವ ಮುಖ್ಯ ಗ್ರಂಥಪಾಲಕರ ಕಚೇರಿಯಿಂದ ಅಥವಾ ವಿಧಾನಸಭೆ ಸಚಿವಾಲಯದ ಅಧಿಕೃತ ವೆಬ್‌ಸೈಟ್ (www.kla.kar.nic.in) ಮೂಲಕ ಉಚಿತವಾಗಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಡಿ.ಡಿ.ಯೊಂದಿಗೆ ನವೆಂಬರ್ 30ರ ಸಂಜೆ 5 ಗಂಟೆಯೊಳಗೆ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಳಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಗ್ರಂಥಪಾಲಕರ ಕಚೇರಿ ದೂರವಾಣಿ: 080-22381350 ಅನ್ನು ಸಂಪರ್ಕಿಸಬಹುದು.

 

 


Share this with Friends

Related Post