Wed. Dec 25th, 2024

ಕೇಜ್ರಿವಾಲ್‌ಗೆ ಹುಚ್ಚು:ಅಶೋಕ್ ವಾಗ್ದಾಳಿ

Share this with Friends

ಬೆಂಗಳೂರು, ಮೇ.12:ಅರವಿಂದ ಕೇಜ್ರಿವಾಲ್‌ ಬಹಳ ದಿನ ಜೈಲಲ್ಲಿದ್ದಿದ್ದರಿಂದ ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ‌ನಡೆಸಿದರು.

ವಯಸ್ಸಿನ ಆಧಾರದ ಮೇಲೆ ಟಿಕೆಟ್ ನೀಡುವ ಕುರಿತು ಬಿಜೆಪಿಯಲ್ಲಿ ತೀರ್ಮಾನ ಕೈಗೊಂಡಿಲ್ಲ ಎಂದು,ಆದರೆ ಕೇಜ್ರಿವಾಲ್ ಏನೇನೊ ಹೇಳಿದ್ದಾರೆ ಎಂದು ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಅವರಿಗೆ ಗೊತ್ತಿಲ್ಲ, ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗುವುದು ನಿಶ್ಚಿತವಾಗಿದೆ ಎಂದು ನುಡಿದರು.

75 ವರ್ಷ ಕಳೆದವರಿಗೆ ಟಿಕೆಟ್‌ ನೀಡಲಾಗುತ್ತದೆ ಅಥವಾ ಟಿಕೆಟ್‌ ನೀಡುವುದಿಲ್ಲ ಎಂಬ ನಿರ್ಧಾರ ನಮ್ಮ ಪಕ್ಷದಲ್ಲಿ ಆಗಿಯೇ ಇಲ್ಲಾ, ಇದನ್ನು ಕಾಂಗ್ರೆಸ್‌ನವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಕೇಜ್ರಿವಾಲ್‌ ಅವರು ಮರಳಿ ಜೈಲಿಗೆ ಹೋಗಲೇಬೇಕು, ಮತ್ತೆ ಬಿಡುಗಡೆಯಾಗುವುದಿಲ್ಲ ಎಂದು ಗುಡುಗಿದರು.

ಅವರು ತಪ್ಪು ಮಾಡಿಲ್ಲವಾದರೆ ನ್ಯಾಯಾಲಯ ಕೂಡಲೇ ಜಾಮೀನು ನೀಡುತ್ತದೆ. ಲಾಲೂ ಪ್ರಸಾದ್‌ ಕೂಡ ಜೈಲಿಗೆ ಹೋಗಿದ್ದಾರೆ. ಜಾಮೀನು ಸಿಕ್ಕಿಲ್ಲ ಎಂದಾದರೆ ಅದಕ್ಕೆ ಸೂಕ್ತವಾದ ಪುರಾವೆ ಇದೆ ಎಂದು ಅರ್ಥ, ತಪ್ಪು ಮಾಡಿದವರು ಮಾತ್ರ ಜೈಲಿಗೆ ಹೋಗಿದ್ದಾರೆ ಎಂದು ಹೇಳಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಹೊಂದಾಣಿಕೆ ದೃಷ್ಟಿಯಿಂದ ಪಕ್ಷದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕೇಂದ್ರದ ನಾಯಕರು ನಿರ್ಧಾರ ಮಾಡಿದ್ದಾರೆ. ಇದರಲ್ಲಿ ರಾಜ್ಯದ ನಾಯಕರ ಪಾತ್ರವಿಲ್ಲ ಎಂದು ‌ತಿಳಿಸಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಜೆಡಿಎಸ್‌ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತದೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.


Share this with Friends

Related Post