Fri. Nov 1st, 2024

ಶ್ರೀ ಶಂಕರಾಚಾರ್ಯರ ಧರ್ಮ ನಿಷ್ಠೆ, ಭಕ್ತಿ ಅನನ್ಯ: ಹೆಚ್. ವಿ ರಾಜೀವ್

Share this with Friends

ಮೈಸೂರು, ಮೇ.12: ಶ್ರೀ ಶಂಕರಾಚಾರ್ಯರ ಧರ್ಮನಿಷ್ಠೆ, ಶ್ರದ್ಧೆ, ಭಕ್ತಿ,ಛಲ ಅನನ್ಯ ಎಂದು ಮೂಡ ಮಾಜಿ ಅಧ್ಯಕ್ಷ ಹೆಚ್. ವಿ ರಾಜೀವ್ ತಿಳಿದರು.

ಶ್ರೀ ಶಂಕರಾಚಾರ್ಯರ ಈ ಗುಣಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಜೀವನದಲ್ಲಿ ಅಳವಡಿಸಿಕೊಳ್ಳಲು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕಾದುದು ಪಾಲಕರ ಆದ್ಯ ಕರ್ತವ್ಯ ಎಂದು ಕರೆ ನೀಡಿದರು.

ನಗರದ ಕನಕಗಿರಿಯಲ್ಲಿರುವ
ಭಾರತಿ ವೃದ್ಧಾಶ್ರಮದಲ್ಲಿ
ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದಿಂದ ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರು, ಸಾಮಾಜಿಕ ಕ್ರಾಂತಿಯ ಸಂತ ಶ್ರೀ ರಾಮಾನುಜಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ವೃದ್ಧಾಶ್ರಮ ವಾಸಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು.

ಸನಾತನ ಧರ್ಮಕ್ಕೆ ಮೂಲಶಕ್ತಿ ನೀಡಿದವರು ಶಂಕರಾಚಾರ್ಯರು,ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವನ್ನ ಎಲ್ಲೆಡೆ ವ್ಯಾಪಿಸಿದರು. ವ್ಯಾಪಕ ಶಕ್ತಿಯ ಶಂಕರ ತತ್ವಗಳ ಪರಿಪಾಲನೆ ಇಂದಿಗೆ ಅಗತ್ಯವಾಗಿದೆ’ ಎಂದು ಹೇಳಿದರು.

ಶಂಕರರ ಭಾಷ್ಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಭವಿಷ್ಯದ ಸಾವಿರಾರು ವರ್ಷಗಳ ಕಾಲವೂ ಇರುವಷ್ಟು ಸತ್ವಯುತವಾಗಿವೆ. ಭಕ್ತಿ, ಜ್ಞಾನ, ವೈರಾಗ್ಯಗಳ ಸಂಗಮಗಳ ದಿವ್ಯ ವ್ಯಕ್ತಿತ್ವ ಅವರನ್ನು ಎಲ್ಲರಲ್ಲಿಯೂ ಸ್ಥಾಯಿ ಮಾಡಿಸಿದೆ ಎಂದು ತಿಳಿಸಿದರು.

ನಂತರ ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಮಾತನಾಡಿ,
ಶ್ರೀ ರಾಮನುಜಾಚಾರ್ಯರ ಕೊಡುಗೆ ಸಮಾಜಕ್ಕೆ ಅಪಾರವಾದುದು,130 ವರ್ಷಗಳ ಕಾಲ ಬದುಕಿದ್ದ ರಾಮಾನುಜರು ಮೇಲುಕೋಟೆಗೆ ಭೇಟಿ ನೀಡಿ ಹಿಂದೂ ಧರ್ಮದ ಮಹತ್ವವನ್ನ ಸಾರಿದರು, ತಣ್ಣೂರು ಕೆರೆ ನಿರ್ಮಿಸಿದರು, ಸಮಾಜದ ಎಲ್ಲಾ ಜಾತಿಯವರಿಗೂ ಸಂಸ್ಕೃತಿ ಸಂಸ್ಕಾರಗಳನ್ನ ಪರಿಚಯಿಸಿಕೊಟ್ಟರು ಎಂದು ವಿವರಿಸಿದರು.

ಕಾಂಗ್ರೆಸ್ ನಗರಾಧ್ಯಕ್ಷ ಆರ್ ಮೂರ್ತಿ, ಮೂಡ ಮಾಜಿ ಅಧ್ಯಕ್ಷರಾದ ಎಚ್. ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ. ಟಿ ಪ್ರಕಾಶ್,ನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ರವಿತೇಜ, ಕಡಕೋಳ ಜಗದೀಶ್, ರಾಕೇಶ್, ದುರ್ಗಾ ಪ್ರಸಾದ್, ಪವನ್, ಗುರು, ಜ್ಯೋತಿ ಮತ್ತು ವೃದ್ಧಾಶ್ರಮದ ವೃದ್ಧರು ಹಾಜರಿದ್ದರು.


Share this with Friends

Related Post