Wed. Dec 25th, 2024

ಬಸವಣ್ಣನವರು,ವಚನಗಳು ಒಂದು ದೇಶಕ್ಕೆ, ಜಾತಿಗೆ ಸೀಮಿತವಲ್ಲ:ಬಸವ ಯೋಗಿಪ್ರಭು

Share this with Friends

ಮೈಸೂರು, ಮೇ.15: ತಿ. ನರಸೀಪುರ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ‌ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಗೌರವಾಧ್ಯಕ್ಷ ನರಸಿಂಹರಾಜಪುರದ ಬಸವಕೇಂದ್ರದ ಬಸವಯೋಗಿಪ್ರಭುಗಳು ಆಶೀರ್ವಚನ ನೀಡಿದರು.

ಬಸವಣ್ಣನವರಾಗಲಿ ಅವರ ವಚನಗಳಾಗಲಿ ಒಂದು ದೇಶಕ್ಕೆ ಒಂದು ಕಾಲಘಟ್ಟಕ್ಕೆ ಒಂದು ಜಾತಿಗೆ ಸೀಮಿತವಲ್ಲ.ಬಸವಣ್ಣನವರು ಕಾಲತೀತ ದೇಶಾತೀತ, ವಿಶ್ವಗುರು ಎಂದು ಹೇಳಿದರು.

ಎಲ್ಲರೂ ಬಸವ ತತ್ವದಂತೆ ನಡೆದರೆ
ವಿಶ್ವದ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.

ಎಲ್ಲಾ ವರ್ಗದ ಕಾಯಕ ಜೀವಿಗಳನ್ನು ಅಪ್ಪಿಕೊಂಡು ಎಲ್ಲಾ ಕಾಯಕಕ್ಕೂ ಸಮಾನತೆ ಕೊಟ್ಟ ಮಹಾನುಭಾವ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೂ ಇಷ್ಟಲಿಂಗವನ್ನು ಕೊಡುವುದರ ಮೂಲಕ
ಅನುಭವ ಮಂಟಪದಲ್ಲಿ
ಸಮಾನತೆ ನೀಡಿದರು.

ಸಾನಿಧ್ಯ ವಹಿಸಿದ್ದ ಮದ್ಗರ್
ಲಿಂಗಯ್ಯನಹುಂಡಿಯ ವಿರಕ್ತ ಮಠದ ಗೌರಿಶಂಕರ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮದಲ್ಲಿ ದಾನವಿಲ್ಲ ದಾಸೋಹವಿದೆ
ಹೋಮ ಹವನ ಅನ್ಯದೇವರ ಪೂಜೆಯನ್ನು ಲಿಂಗವಂತರುಮಾಡಬಾರದು,
ಇಷ್ಟಲಿಂಗವನ್ನು ಕಣ್ತೆರೆದು ನೋಡುವುದರ ಮೂಲಕ ಧ್ಯಾನಿಸಬೇಕು ಎಂದು ತಿಳಿಸಿದರು.

ತಾಲೂಕು ಜಾಗತಿಕ ಮಹಾಸಭಾದ ಅಧಕ್ಷ ಟಿ.ಎಂ.ರವಿ ಮಾತನಾಡಿದರು .

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮಹದೇವಪ್ಪ, ಸೇತುವೆ ಮಠದ ಸಹಜಾನಂದ ಸ್ವಾಮಿಗಳು,
ಬಿಲಿಗೆರೆಹುಂಡಿ ಗುರು ಮಲ್ಲೇಶ್ವರ ಮಠದ ಗುರುಸ್ವಾಮೀಜಿ, ಚೌಹಳ್ಳಿ ಲಿಂಗರಾಜಪ್ಪ, ನಂಜನಗೂಡು ನಂಜಪ್ಪ, ಗುರುಸಿದ್ದಮ್ಮ, ಪ್ರಧಾನ ಕಾರ್ಯದರ್ಶಿ ಬಸವಣ್ಣ, ಹೆಳವರಹುಂಡಿ ಬಸವೇಶ್ವರ ಭಜನಾ ಬಳಗ ಮತ್ತು ಬಸವ ಭಕ್ತರು ಉಪಸ್ಥಿತರಿದ್ದರು.


Share this with Friends

Related Post