Fri. Nov 1st, 2024

ಡೊನೇಷನ್ ಹಾವಳಿ ತಪ್ಪಿಸಲು ಚೇತನ್ ಕಾಂತರಾಜು ಆಗ್ರಹ

Share this with Friends

ಮೈಸೂರು,ಮೇ.15: ಶೈಕ್ಷಣಿಕ ವರ್ಷ ಆರಂಭವಾಗುತ್ತಲೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೊನೇಷನ್‌ ಹಾವಳಿ ಶುರುವಾಗಿದ್ದು,ಕಡಿವಾಣ ಹಾಕಬೇಕಿದೆ.

ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ವಹಿಸಿ ಡೊನೇಶನ್ ಹಾವಳಿ ತಪ್ಪಿಸಬೇಕು ಎಂದು ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಆಗ್ರಹಿಸಿದ್ದಾರೆ

ವಿದ್ಯಾರ್ಥಿಗಳು ಪದವಿ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಪಡೆಯಲು ಲಕ್ಷಾಂತರ ರೂಪಾಯಿ ಡೊನೇಷನ್ ಪಾವತಿಸಬೇಕಿದೆ.

ಸರ್ಕಾರ ನಿಗದಿಪಡಿಸುವ ಕಡಿಮೆ ಶುಲ್ಕವನ್ನೇ ಪಡೆದುಕೊಳ್ಳುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರ ಅನೇಕ ರೀತಿಯಲ್ಲಿ ಸೌಲಭ್ಯ ಒದಗಿಸುತ್ತದೆ. ಶುಲ್ಕದಲ್ಲಿ ವಿನಾಯಿತಿ ನೀಡಿದರೆ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಬಡವರಿಗೆ ಅನುಕೂಲವಾಗುತ್ತದೆ. ಖಾಸಗಿ ಪ್ರಥಮ ದರ್ಜೆ ಕಾಲೇಜುಗಳಿಂದ ಹಾಗೂ ಪದವಿ ಪೂರ್ವ ಕಾಲೇಜುಗಳಿಂದ ಪಾಲಕರಿಗೆ ಆಗುವ ಕಿರುಕುಳ ತಪ್ಪಿಸಬೇಕು ಎಂದು

ಪಿಯು ಫಲಿತಾಂಶ ಬಂದು ತಿಂಗಳೂ ಆಗಿಲ್ಲ, ಈಗಾಗಲೇ ಎಲ್ಲ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಮುಗಿದಿವೆ ಎನ್ನುತ್ತಿದ್ದಾರೆ, ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣ ಪ್ರವೇಶಾತಿಯಿಂದ ವಂಚಿತರಾಗಲಿದ್ದಾರೆ.

ಆದ್ದರಿಂದ ಖಾಸಗಿ ಪದವಿ ಕಾಲೇಜುಗಳು ಹಾಗೂ ಪದವಿಪೂರ್ವ ಕಾಲೇಜುಗಳು ರೋಸ್ಟ‌ರ್ ಪದ್ಧತಿ ಅನುಸರಿಸಿ ಪ್ರವೇಶ ಪ್ರಕ್ರಿಯೆ ಆರಂಭಿಸಲು ಆದೇಶಿಸಬೇಕು. ಇಲ್ಲವಾದರೆ ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಮನದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಚೇತನ್ ಕಾಂತರಾಜು ಎಚ್ಚರಿಸಿದ್ದಾರೆ.


Share this with Friends

Related Post