Sat. Mar 7th, 2026

ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದ್ದ‌ ಮಾಸ್ತಿ:ಡಾಕ್ಟರ್ ವೈ ಡಿ ರಾಜಣ್ಣ

Share this with Friends

ಮೈಸೂರು, ಜೂ.7:ಮಾಸ್ತಿಯವರು ಕನ್ನಡ ಸಾಹಿತ್ಯದ ಪ್ರವರ್ಧಮಾನಕ್ಕೆ ತಮ್ಮ
ಬದುಕನ್ನೇ ಸಮರ್ಪಿಸಿಕೊಂಡವರು ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಡಾಕ್ಟರ್ ವೈ. ಡಿ ರಾಜಣ್ಣ ಹೇಳಿದರು.

ನಗರದ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಜಣ್ಣ ಮಾತನಾಡಿದರು.

ಕಥೆ, ಕಾದಂಬರಿ, ಕವಿತೆ, ನಾಟಕ ವಿಮರ್ಶೆ ಅನುವಾದ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ 123 ಕ್ಕೂ ಹೆಚ್ಚು ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ಬಣ್ಣಿಸಿದರು.

ಮೈಸೂರು ಸಂಸ್ಥಾನದಲ್ಲಿ ರೆವಿನ್ಯೂ ಅಧಿಕಾರಿಯಾಗಿ ಆಡಳಿತದಲ್ಲೂ ಗ್ರೀಕ್, ಇಂಗ್ಲೀಷ್ ಪದಗಳಿಗೆ ಕನ್ನಡದ ಹೆಸರುಗಳನ್ನು ತಂದು ಕನ್ನಡತನ ಮೆರೆದರು. ಮಾಸ್ತಿ ಅವರ ಸಾಹಿತ್ಯ ಕಾಲಾತೀತ ಎಂದು ತಿಳಿಸಿದರು.

ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ ಅವರು ಮಾತನಾಡಿ,
ಮಾಸ್ತಿ ತಾವು ಬರೆಯುತ್ತಲೇ ತಮ್ಮ ನೆರವು ಕೋರಿ ಬಂದವರಿಗೂ ಆಸರೆಯಾದರು ಎಂದು ಹೇಳಿದರು.

ಬೇಂದ್ರೆ, ಜಿ ಪಿ ರಾಜರತ್ನಂ ಸೇರಿದಂತೆ ಆ ಕಾಲದ ಬಹಳಷ್ಟು ಲೇಖಕರ ಸಾಹಿತ್ಯ ರಚನೆಗೆ ಒತ್ತಾಸೆಯಾಗಿ ನಿಂತರು. ಈ ಎಲ್ಲ ಸಮಾಜಮುಖಿ ಕಾರ್ಯಗಳಿಂದ ನಾಲ್ವಡಿ ಅವರಿಂದ ರಾಜ ಸೇವಾಸಕ್ತ ಪ್ರಶಸ್ತಿಗೆ ಮಾಸ್ತಿ ಭಾಜನರಾದರು,ಮಾತೃ ಭಾಷೆ ತಮಿಳು, ಆದರೆ ಅವರ ಕನ್ನಡ ಪ್ರೀತಿ ಅಮರವಾದದ್ದು ಎಂದು ಕೊಂಡಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ,ಮಾಸ್ತಿಯವರು ಹಲವು ಒತ್ತಡಗಳ ನಡುವೆಯೂ ಬಹಳಷ್ಟು ಸಾಹಿತ್ಯ ಕೃಷಿ ಮಾಡಿದ್ದಾರೆ. ಅವರ ಸಾಹಿತ್ಯದಲ್ಲಿ ಎಲ್ಲೂ ಆಶ್ಲೀಲ ಪದಗಳು ಮತ್ತು ವೈಭವೀಕರಣಗಳು ಕಂಡುಬರುವುದೇ ಇಲ್ಲ. ಜನಸಾಮಾನ್ಯರಿಗೆ ಮನದಟ್ಟಾಗುವಂತೆ ಸರಳವಾದ ಮೌಲ್ಯಾಧಾರಿತ ಕಥೆಗಳನ್ನು ರಚಿಸಿರುವುದು ಅವರ ವಿಶೇಷ ಎಂದು ತಿಳಿಸಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಕೆಎಂಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಜಿ ರಾಘವೇಂದ್ರ, ಅಜಯ್ ಶಾಸ್ತ್ರಿ ,ವಿನಯ್ ಕಣಗಾಲ್, ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು,
ಶ್ರೀಕಾಂತ್ ಕಶ್ಯಪ್, ಸಚಿಂದ್ರ, ಯದು ನಂದನ್, ಕುಲಕರ್ಣಿ ಮತ್ತಿತರರು ಹಾಜರಿದ್ದರು.


Share this with Friends

Related Post